ಕರ್ನಾಟಕ

karnataka

ETV Bharat / state

ಹಣ್ಣುಗಳ ರಾಜನಿಗೆ ಹೊಡೆಯಿತು ಸನ್​ಸ್ಟ್ರೋಕ್​!​ ಮಾವುಪ್ರಿಯರಿಗೆ ಕಹಿಸುದ್ದಿ - undefined

ವಿಪರೀತ ತಾಪಮಾನದಿಂದ ಮಾವಿಗೆ ಹಸಿರು ಕೀಟಗಳ ಕಾಟ ಶುರುವಾಗಿರುವುದು ಬೆಳೆಗಾರರಿಗೆ ಸಂಕಷ್ಟ ಉಂಟುಮಾಡಿದೆ

ಹಣ್ಣುಗಳ ರಾಜ ಮಾವಿಗೆ ಕೀಟಬಾದೆ

By

Published : Apr 11, 2019, 5:16 AM IST

ರಾಯಚೂರು:ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಹಣ್ಣಿನ ರಾಜ ಮಾವಿನದ್ದೇ ಅಬ್ಬರ. ಆದರೆ ಈ ಬೇಸಿಗೆಯಲ್ಲಿ ಸಿಹಿ ಮಾವಿನ ನಿರೀಕ್ಷೆಯಲ್ಲಿರುವ ಮಾವು ಪ್ರಿಯರಿಗೆ ಕಹಿ ಸುದ್ದಿಯೊಂದಿದೆ.

ಮಾರುಕಟ್ಟೆಯಲ್ಲಿ ರಾರಾಜಿಸಬೇಕಾದ ಮಾವಿನ ಹಣ್ಣು ಈ ಬಾರಿ ವಿಪರೀತ ತಾಪಮಾನದಿಂದ ರೋಗಗಕ್ಕೀಡಾಗಿವೆ. ಇದು ಮಾವು ಪ್ರಿಯರಿಗಿಂತ ಬೆಳೆಗಾರರಿಗಂತೂ ಭಾರಿ ಆತಂಕ ಉಂಟುಮಾಡಿದೆ.

ಹಣ್ಣುಗಳ ರಾಜ ಮಾವಿಗೆ ಕೀಟಬಾದೆ

ಈ ಬೇಸಿಗೆಯಲ್ಲಿ ಹೆಚ್ಚಿನ ಉಷ್ಣಾಂಶ ಇರುವುದರಿಂದ ಮಾವಿನ ಮರದ ಎಲೆ ಹಾಗೂ ಹಣ್ಣುಗಳಿಗೆ ಹಸಿರು ಕೀಟ ತಗುಲಿದೆ. ಈ ಹಣ್ಣುಗಳು ಜನರ ಆರೋಗ್ಯದ ಮೇಲೂ ದುಷ್ಪರಿಣಾಮಗಳು ಬೀರುತ್ತವೆ.

ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುವ ಬಿಸಿಲಿನ ತಾಪಮಾನ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ತಂದೊಡ್ಡುವುದರೊಂದಿಗೆ ಈ ಬಾರಿ ಮಾವಿಗೂ ಏಟು ನೀಡಿದೆ. ಕಷ್ಟಪಟ್ಟು ಬೆಳೆದ ಮಾವಿನ ಬೆಳೆ ಕೀಟಗಳಿಗೆ ಬಲಿಯಾಗುತ್ತಿರುವುದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ಇನ್ನು ಎಂತದ್ದೋ ಮಾವಿನ ಹಣ್ಣು ತಿಂದರೆ ನಮ್ಮ ಗತಿ ಏನು ಎಂದು ಜನರೂ ಯೋಚಿಸುವಂತಾಗಿದೆ. ಈ ಮಧ್ಯೆ ಗುಣಮಟ್ಟ ಮತ್ತು ರಾಸಾಯನಿಕ ಔಷಧ ಸಿಂಪಡಿಸಿದ ಹಣ್ಣುಗಳು ಸೇವಿಸುವುದು ಉತ್ತಮ ಎನ್ನುವುದು ಕೃಷಿ ವಿಜ್ಞಾನ ಸಲಹೆ.

ಒಟ್ಟಿನಲ್ಲಿ ಬಿರು ಬೇಸಿಗೆಯ ಎಫೆಕ್ಟ್​ನಿಂದ ನಲುಗುತ್ತಿರುವ ಮಾವಿನ ಹಣ್ಣುಗಳನ್ನು ಕೊಂಚ ಎಚ್ಚರಿಕೆಯಿಂದಲೇ ಸೇವಿಸುವುದು ಉತ್ತಮ.

For All Latest Updates

TAGGED:

ABOUT THE AUTHOR

...view details