ರಾಯಚೂರು : ಬಿಸಿಲಿನ ತಾಪಮಾನಕ್ಕೆ ಹೆದರಿ ಮನೆಯಿಂದ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದ್ದು ಸೂರ್ಯ ನೆತ್ತಿಯ ಮೇಲೆ ಬರುವಷ್ಟರಲ್ಲಿ ಜನ ಮನೆ ಸೇರುತ್ತಾರೆ. ಆದರೆ, ಅನಿವಾರ್ಯ ಎನ್ನುವಂತೆ ಬೈಕ್ ಸವಾರರು ಸೂರ್ಯನಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಹುಡುಕಿದ್ದು ಅದು ಈಗ ಹೊಸ ಟ್ರೆಂಡ್ ಆಗಿದೆ.
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹೊಸ ಐಡಿಯಾ.. ಬೈಕ್‌ಗಳಿಗೆ ಪರದೆ ಕಟ್ಟೋದು ಹೊಸ ಟ್ರೆಂಡ್ - heavy sunshine
ಸೂರ್ಯನಿಂದ ರಕ್ಷಣೆ ಪಡೆಯಲು ಬೈಕ್ ಸವಾರರು ತಮ್ಮ ಬೈಕ್ ಗಳಿಗೆ ಪರದೆಯನ್ನ ಕಟ್ಟಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ಬೇಸಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನ ತಂಪು ಪಾನೀಯಗಳು ಮತ್ತು ತೆಳ್ಳನೆ ಬಟ್ಟೆಯನ್ನು ಧರಿಸುತ್ತಿದ್ದಾರೆ. ಆದರೆ, ನಿತ್ಯ ಕೆಲಸಕ್ಕಾಗಿ ತಿರುಗಾಡುವ ಬೈಕ್ ಸವಾರರು ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೈಕ್‌ಗಳಿಗೆ ಪರದೆ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ.
ಈ ಹಿಂದೆ ಕೆಲವೆಡೆ ಕೇವಲ ಬೆರಳಣಿಕೆ ಜನ ಈ ರೀತಿ ಪರದೆ ಕಟ್ಟಿಕೊಂಡು ತಿರುಗಾಡುತ್ತಿದ್ದರು. ಆದರೆ, ಈಗ ಬಹುತೇಕರು ತಮ್ಮ ಬೈಕ್‌ಗಳಿಗೆ ಪರದೆ ಕಟ್ಟಿಕೊಂಡು ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾರೆ. ಏನೇ ಆದರೂ ಈ ಸುಡುವ ಬಿಸಿಲಿಗೆ ಎಲ್ಲರೂ ಕಂಗೆಟ್ಟಿದ್ದು ಈಗ ತಮ್ಮ ರಕ್ಷಣೆಗೆ ಪರದೆ ಕಟ್ಟಿಕೊಂಡು ಹೊಸ ಟ್ರೆಂಡ್ ಶುರು ಮಾಡಿದ್ದಾರೆ.