ಕರ್ನಾಟಕ

karnataka

ETV Bharat / state

ರಾಯಚೂರು: ಬಿರುಗಾಳಿ, ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ - Heavy rain raichuru

ತಾಲೂಕಿನ ಯದ್ಲಾಪುರ ಗ್ರಾಮದ ಬಳಿಯ ಟಿನ್ ಶೆಡ್ ಮನೆಗಳ ಟಿನ್​​ಗಳು ಗಾಳಿಯ ರಭಸಕ್ಕೆ ವಿದ್ಯುತ್ ಕಂಬದ ಸರ್ವಿಸ್ ವೈರ್ ಮೇಲೇರಿವೆ. 9 ಟಿನ್ ಶೆಡ್​​ಗಳ ಮನೆಗಳಿಗೆ ಹಾನಿ ಸಂಭವಿಸಿದ್ದು, ಮನೆಯ ಗೋಡೆ ಬಿರುಕು ಬಿಟ್ಟಿವೆ. ಇನ್ನು ಮನೆಯಲ್ಲಿದ್ದ ಓರ್ವ ವ್ಯಕ್ತಿಯು ಗಾಯಗೊಂಡಿದ್ದಾನೆ.

raichur
ಹಾರಿಹೋದ ಮನೆ ಮೇಲಿನ ಶೆಡ್​

By

Published : May 27, 2020, 8:06 AM IST

Updated : May 27, 2020, 10:08 AM IST

ರಾಯಚೂರು: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆ ಹಲವು ಕಡೆ ಜನ-ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ತಾಲೂಕಿನ ಯದ್ಲಾಪುರ ಗ್ರಾಮದ ಬಳಿಯ ಟಿನ್ ಶೆಡ್ ಮನೆಗಳ ಟಿನ್​​ಗಳು ಗಾಳಿಯ ರಭಸಕ್ಕೆ ವಿದ್ಯುತ್ ಕಂಬದ ಸರ್ವಿಸ್ ವೈರ್ ಮೇಲೇರಿವೆ. 9 ಟಿನ್ ಶೆಡ್​​ಗಳ ಮನೆಗಳಿಗೆ ಹಾನಿ ಸಂಭವಿಸಿದ್ದು, ಮನೆಯ ಗೋಡೆ ಬಿರುಕು ಬಿಟ್ಟಿವೆ. ಇನ್ನು ಮನೆಯಲ್ಲಿದ್ದ ಓರ್ವ ವ್ಯಕ್ತಿಯು ಗಾಯಗೊಂಡಿದ್ದಾನೆ.

ಬಿರುಗಾಳಿ, ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಇನ್ನು ನಗರದ ಇಂಜಿನಿಯರ್ಸ್ ಬಡವಣೆಯಲ್ಲಿ ವಿದ್ಯುತ್ ವೈರ್​​ಗಳ ಸ್ಪರ್ಶದಿಂದ ವಿದ್ಯುತ್ ಸ್ಪಾರ್ಕ್ ಆಗಿ ಬೆಂಕಿ ಕಿಡಿಗಳು ಬೀಳುತ್ತಿರುವುದು ಕಂಡು ಬಂದಿದೆ. ಅದೃಷ್ಟವಾಶಾತ್ ಯಾರಿಗೆ ಜೀವ ಹಾನಿ ಸಂಭವಿಸಿಲ್ಲ. ವಿದ್ಯುತ್ ಕಂಬದ ಮೇಲೆ ಟಿನ್ ಶೆಡ್ ಬಿದ್ದಿರುವ ಪರಿಣಾಮ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

Last Updated : May 27, 2020, 10:08 AM IST

ABOUT THE AUTHOR

...view details