ರಾಯಚೂರು:ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಉಕ್ಕಿ ಹರಿಯುತ್ತಿರುವ ಹಳ್ಳ ದಾಟಲಾಗದ ಜನರನ್ನು ಟ್ರ್ಯಾಕ್ಟರ್ ಮತ್ತು ಹಗ್ಗದ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಮಸ್ಕಿ: ಭಾರೀ ಮಳೆಯಿಂದ ಹಳ್ಳ ದಾಟಲಾಗದೆ ಸಂಕಷ್ಟ... ಟ್ರ್ಯಾಕ್ಟರ್-ಹಗ್ಗದ ಸಹಾಯದಿಂದ ಜನರ ರಕ್ಷಣೆ - ರಾಯಚೂರು ಮಳೆ ಸುದ್ದಿ
ಭಾರೀ ಮಳೆಯಿಂದ ಮಸ್ಕಿ ತಾಲೂಕಿನ ವಟಗಲ್ ಹಾಗೂ ಇರಕಲ್ ರಸ್ತೆ ಸಂಪರ್ಕ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ.
ರಾಯಚೂರಿನಲ್ಲಿ ಭಾರೀ ಮ
ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದ ಮಸ್ಕಿ ತಾಲೂಕಿನ ವಟಗಲ್ ಹಾಗೂ ಇರಕಲ್ ಗ್ರಾಮದ ಮಧ್ಯದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಈ ರಸ್ತೆ ಮೂಲಕ ಜಮೀನಿನ ಕೆಲಸಕ್ಕೆ ಹೋದ ಸುಮಾರು 70 ಮಂದಿ ಗ್ರಾಮಕ್ಕೆ ಮರಳಿ ಬರಲಾಗದೆ ಹಳ್ಳದ ದಂಡೆಯಲ್ಲಿ ಪರದಾಡಿದ್ದಾರೆ.
ಅಪಾಯದ ಮಟ್ಟ ಮೀರಿ ಹರಿಯುವ ಹಳ್ಳದ ಮಧ್ಯದಲ್ಲಿ ಟ್ರ್ಯಾಕ್ಟರ್ ನಿಲ್ಲಿಸಲಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ಹಳ್ಳದಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಹಗ್ಗದ ಸಹಾಯದಿಂದ ಗ್ರಾಮಸ್ಥರನ್ನ ರಕ್ಷಣೆ ಮಾಡಲಾಗಿದೆ.