ರಾಯಚೂರು: ಜಿಲ್ಲೆಯ ವಿವಿಧ ಕಡೆ ನಿನ್ನೆ ರಾತ್ರಿ ಜೋರು ಮಳೆ ಸುರಿದಿದೆ.
ರಾಯಚೂರಿನ ಹಲವೆಡೆ ಬಿರುಗಾಳಿ ಸಹಿತ ಜೋರುಮಳೆ - ರಾಯಚೂರಿನಲ್ಲಿ ಭಾರೀ ಮಳೆ ಸುದ್ದಿ
ರಾಯಚೂರು ಜಿಲ್ಲೆಯ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ರಾಯಚೂರಿನ ಹಲವೆಡೆ ಮಳೆ
ಗುಡುಗು - ಮಿಂಚು, ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಕೆಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.
ರಸ್ತೆಗಳಲ್ಲೂ ನೀರು ನಿಲುಗಡೆಯಿಂದ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಯ್ತು. ಬಿರುಗಾಳಿ ಬೀಸಿದ್ದರಿಂದ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಇದರಿಂದ ಜನರು ವಿದ್ಯುತ್ ಇಲ್ಲದೇ ಪರದಾಡುವಂತಾಯ್ತು.