ರಾಯಚೂರು: ಜಿಲ್ಲೆಯಾದ್ಯಂತ ನಿನ್ನೆ ಸುರಿದ ಮಳೆ-ಗಾಳಿ ಅವಾಂತರವನ್ನೇ ಸೃಷ್ಟಿಸಿದೆ. ಮಳೆ ಗಾಳಿಯ ರಭಸಕ್ಕೆ ಮರ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಜಿನ್ನಾಪೂರ ಗ್ರಾಮದಲ್ಲಿ ನಡೆದಿದೆ.
ಮರದ ಕೊಂಬೆ ಬಿದ್ದು ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿ ಸಾವು - undefined
ಮಳೆ ಮತ್ತು ರಭಸವಾದ ಗಾಳಿ ಬೀಸಿದ್ದರಿಂದ ಬೇವಿನ ಮರದ ಟೊಂಗೆ ಬಿದ್ದು ಕಟ್ಟೆಯ ಮೇಲೆ ಮಲಗಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ.
![ಮರದ ಕೊಂಬೆ ಬಿದ್ದು ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿ ಸಾವು](https://etvbharatimages.akamaized.net/etvbharat/prod-images/768-512-3447725-thumbnail-3x2-lek.jpg)
ಮರ
ದುರ್ಗಪ್ಪ ನಾಯಕ (62) ಮೃತ ವ್ಯಕ್ತಿ. ಗ್ರಾಮದಲ್ಲಿನ ಹನುಮಪ್ಪ ದೇವಾಲಯದ ಕಟ್ಟೆಯ ಮೇಲೆ ದುರ್ಗಪ್ಪ ಮಲಗಿದ್ದಾನೆ. ಈ ವೇಳೆ ಮಳೆ ಮತ್ತು ರಭಸವಾದ ಗಾಳಿ ಬೀಸಿದ್ದರಿಂದ ಬೇವಿನ ಮರದ ಟೊಂಗೆ ದುರ್ಗಪ್ಪ ಮೇಲೆ ಬಿದ್ದು ಕಟ್ಟೆಯ ಮೇಲೆ ಮಲಗಿದ್ದ ದುರ್ಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ಘಟನಾ ಸ್ಥಳಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತನ ಕುಟುಂಬಸ್ಥರಿಗೆ ಸ್ವಾಂತನ ಹೇಳಿದ್ದಾರೆ. ಈ ಸಂಬಂಧ ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.