ರಾಯಚೂರು: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹೆಗ್ಗಸನಳ್ಳಿ ಗ್ರಾಮವೊಂದು ಜಲಾವೃತಗೊಂಡಿದೆ.
ರಾಯಚೂರಿನಲ್ಲಿ ಧಾರಾಕಾರ ಮಳೆ.. ಸಂಪೂರ್ಣ ಜಲಾವೃತಗೊಂಡ ಗ್ರಾಮ..
ರಾಯಚೂರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹೆಗ್ಗಸನಳ್ಳಿ ಗ್ರಾಮವೊಂದು ಜಲಾವೃತಗೊಂಡಿದೆ.
ತಾಲೂಕಿನ ಹೆಗ್ಗಸನಳ್ಳಿ ಗ್ರಾಮ ಬಹುತೇಕ ಮಳೆ ನೀರಿನಿಂದ ಜಲಾವೃತ್ತಗೊಂಡು ಮನೆಗಳಿಗೆ, ಶಾಲೆಗೆ, ದೇವಾಲಯಗಳಲ್ಲಿ ನೀರು ನುಗ್ಗಿ ಜನ-ಜೀವನ ಸಂಪೂರ್ಣ ಹದಗೆಟ್ಟಿದೆ. ಗ್ರಾಮದಲ್ಲಿನ ಹಲವು ಮನೆಯೊಳಗೆ ನೀರು ನುಗ್ಗಿ ಆಹಾರ, ಧವಸ-ಧಾನ್ಯಗಳು, ಬಟ್ಟೆಗಳು ಹಾಗೂ ಮನೆಯ ಬಳಕೆ ವಸ್ತುಗಳು ನೀರು ಪಾಲಾಗಿ ಗ್ರಾಮಸ್ಥರು ಸಂಕಷ್ಟ ಎದುರಿಸುವಂತಾಗಿದೆ. ಮನೆಯಿಂದ ನೀರು ಹೊರಹಾಕಲು ಹರಸಹಾಸ ಪಡುವಂತಾಗಿದೆ. ಗ್ರಾಮದಲ್ಲಿನ ಶಾಲೆ ಆವರಣದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ಶಾಲಾ ಮಕ್ಕಳು ಸಹ ಶಾಲೆಗೆ ತೆರಳಲು ತೊಂದರೆ ಉಂಟಾಗಿದೆ.
ಇನ್ನು, ಜಲಾವೃತ್ತಗೊಂಡು ಸಂಕಷ್ಟ ಎದುರಿಸುತ್ತಿರುವ ಗ್ರಾಮಕ್ಕೆ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಗ್ರಾಮಕ್ಕೆ ತಹಶೀಲ್ದಾರ್ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಭೇಟಿ ನೀಡಿದರು.