ಕರ್ನಾಟಕ

karnataka

ETV Bharat / state

ರಾಯಚೂರಿನ ಹಾಲಾಪುರ ಗ್ರಾಮದಲ್ಲೇ ಅತಿ ಹೆಚ್ಚು ಮಳೆ! - raichur rain news

ಸೇತುವೆ ಮೇಲೆ ನೀರು ಹರಿಯುತ್ತಿದೆ. ಹಳ್ಳ ದಾಟುವ ವೇಳೆ ನಾಲ್ವರು ಬೈಕ್ ಸವಾರರು ಅಪಾಯಕ್ಕೆ ಸಿಲುಕಿ ಬಳಿಕ ಪಾರಾಗಿದ್ದಾರೆ. ಬೈಕುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎನ್ನಲಾಗುತ್ತಿದೆ..

heavy rain in halapura village
ಹಾಲಾಪುರ ಗ್ರಾಮದಲ್ಲಿ ಧಾರಾಕಾರ ಮಳೆ

By

Published : Jun 27, 2021, 2:56 PM IST

ರಾಯಚೂರು :ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶವಾಗಿದೆ. ರಾಯಚೂರು ಜಿಲ್ಲೆಯ ಹಾಲಾಪುರ ಗ್ರಾಮದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯ ಮಾನವಿ ತಾಲೂಕಿನ ಹಾಲಾಪುರ ಗ್ರಾಮದಲ್ಲಿ 195 ಮಿ.ಮೀ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣೆ ಕೇಂದ್ರದಲ್ಲಿ ದಾಖಲಾಗಿದೆ.

ಹಾಲಾಪುರ ಗ್ರಾಮದಲ್ಲಿ ಧಾರಾಕಾರ ಮಳೆ

ಕಳೆದ ರಾತ್ರಿಯಿಂದ ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಾನವಿ ತಾಲೂಕಿನ ಹಾಲಾಪುರ ಗ್ರಾಮದಲ್ಲಿ 195 ಮಿ.ಮೀ ಅತಿ ಹೆಚ್ಚು ಮಳೆಯಾಗಿರುವುದು ದಾಖಲಾಗಿದೆ. ಅಲ್ಲದೇ ಪಾಮನಕಲ್ಲೂರು-ಹಾಲಾಪುರ ರಸ್ತೆಯಲ್ಲಿ ಬರುವ ಹಳ್ಳದ ಸೇತುವೆ ಸಂಪೂರ್ಣ ಜಲಾವೃತಗೊಂಡು ಸಂಚಾರ‌ ಸ್ಥಗಿತವಾಗಿದೆ.

ಇದನ್ನೂ ಓದಿ:ವರುಣನ ಆರ್ಭಟಕ್ಕೆ ಮಂತ್ರಾಲಯ ಜಲಾವೃತ.. ಜನ-ಜೀವನ ಅಸ್ತವ್ಯಸ್ತ, ರಾಯರ ಭಕ್ತರಿಗೂ ಸಂಕಷ್ಟ!

ಸೇತುವೆ ಮೇಲೆ ನೀರು ಹರಿಯುತ್ತಿದೆ. ಹಳ್ಳ ದಾಟುವ ವೇಳೆ ನಾಲ್ವರು ಬೈಕ್ ಸವಾರರು ಅಪಾಯಕ್ಕೆ ಸಿಲುಕಿ ಬಳಿಕ ಪಾರಾಗಿದ್ದಾರೆ. ಬೈಕುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎನ್ನಲಾಗುತ್ತಿದೆ.

ABOUT THE AUTHOR

...view details