ಕರ್ನಾಟಕ

karnataka

ETV Bharat / state

ರಾಯಚೂರು ಜಿಲ್ಲಾದ್ಯಂತ ಭಾರಿ ಮಳೆ: 30 ಮೇಕೆಗಳ ಸಾವು - ರಾಯಚೂರು ಜಿಲ್ಲೆಯ ಮಳೆ ಸುದ್ದಿ

ರಾಯಚೂರು ಜಿಲ್ಲಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಕೆಲವು ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಲಿಂಗಸುಗೂರು ತಾಲೂಕಿನ ವಂದಲಿ, ಬಗಡಿ ತಾಂಡಾದಲ್ಲಿ ಹಸು, ಎಮ್ಮೆ ಹಾಗೂ ಮೇಕೆಗಳು ಮೃತಪಟ್ಟಿವೆ.

ರಾಯಚೂರು ಜಿಲ್ಲೆಯಾದ್ಯಂತ ಭಾರಿ ಮಳೆಗೆ ಸಾಕುಪ್ರಾಣಿಗಳ ಸಾವು

By

Published : Oct 11, 2019, 11:55 AM IST

ರಾಯಚೂರು:ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಕ್ಟೋಬರ್ 10ರಂದು ರಾತ್ರಿ ಸುರಿದ ಮಳೆಯಿಂದ ಲಿಂಗಸುಗೂರು ತಾಲೂಕಿನ ವಂದಲಿ, ಬಗಡಿ ತಾಂಡಾದಲ್ಲಿ ಸಿಡಿಲಿಗೆ ಒಂದು ಹಸು, ಎಮ್ಮೆ ಹಾಗೂ 30 ಮೇಕೆಗಳು ಬಲಿಯಾಗಿವೆ.

ರಾಯಚೂರು ಜಿಲ್ಲೆಯಾದ್ಯಂತ ಭಾರಿ ಮಳೆ

ಈರಣ್ಣ ಹಾಗೂ ನಾರಾಯಣ ಪೂಜಾರಿ ಎಂಬುವವರಿಗೆ ಸೇರಿದ ಹಸು, ಎಮ್ಮೆಗಳಾಗಿವೆ. ವಂದಲಿ ತಾಂಡಾದ ನಿವಾಸಿ ಯಮನಪ್ಪ ಛತ್ರಪ್ಪ ಮುಂದಿನಮನಿ ಎಂಬುವವರ ಸುಮಾರು 30ಕ್ಕೂ ಹೆಚ್ಚು ಮೇಕೆಗಳು ರಾತ್ರಿ ಸುರಿದ ಬಾರಿ ಮಳೆಯಿಂದ ಸಾವಿಗೀಡಾಗಿವೆ. ಸದ್ಯ ಮೋಡ ಕವಿದ ವಾತಾವರಣವಿದ್ದು, ಬಿಸಿಲನಾಡಲ್ಲಿ ಮಲೆನಾಡಿನ ವಾತಾವರಣ ಕಂಡು ಬರುತ್ತಿದೆ.

ABOUT THE AUTHOR

...view details