ರಾಯಚೂರು :ಕೋವಿಡ್ ಕಾರಣದಿಂದ ದೇವಾಲಯಗಳ ಬಾಗಿಲು ಮುಚ್ಚಿದ್ದರೂ, ಕಾರ ಹುಣ್ಣಿಮೆ ದಿನವಾದ ಇಂದು ಭಕ್ತರು ದೇವಾಲಯದ ಗೇಟ್ ಮುಂದೆ ಕಾಯಿ ಒಡೆಯುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂತು.
ನಗರದ ಶ್ರೀ ಕಂದಗಡ್ಡೆ ಮಾರೆಮ್ಮದೇವಿ ದೇವಾಲಯದ ಮುಂದೆ ಕಾರ ಹುಣ್ಣಿಮೆ ಪ್ರಯುಕ್ತ ಭಕ್ತರು ಪೂಜೆ ಸಲ್ಲಿಸಿದರು. ನೈವೇದ್ಯ ಮಾಡಿ, ತೆಂಗಿನಕಾಯಿ ಒಡೆದು ತಮ್ಮ ಭಕ್ತಿ ಸಮರ್ಪಿಸಿದರು.