ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಗೋನವಾಟ್ಲ ತಾಂಡಾಕ್ಕೆ ಗುಳೆ ಹೋದವರು ಮರಳಿ ಬಂದಿದ್ದು, ಅನಾರೋಗ್ಯದಿಂದ ಬಳಲುತಿದ್ದರೂ, ಆರೋಗ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ತಾಂಡಾ ಜನತೆ ಸಾಮೂಹಿಕವಾಗಿ ಆರೋಪಿಸಿದ್ದರು.
ಈಟಿವಿ ಭಾರತ ತಾಂಡಾ ‘ಜನತೆ ಆರೋಗ್ಯ ರಕ್ಷಣೆಗೆ ಮುಂದಾಗದ ಆಡಳಿತ ವ್ಯವಸ್ಥೆ’ಎಂದು ಸುದ್ದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಆಡಳಿತ ಅಧಿಕಾರಿಗಳು, ಮಂಗಳವಾರ ಗೋನವಾಟ್ಲ ತಾಂಡಾಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಗೋವಾ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ನಗರಗಳಿಂದ ಮರಳಿ ಬಂದವರು ಸೇರಿದಂತೆ ೧೫೦ ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಯಿತು.