ಕರ್ನಾಟಕ

karnataka

ETV Bharat / state

ಹಟ್ಟಿ ಪಟ್ಟಣ ಅಭಿವೃದ್ಧಿಗೆ ಆದ್ಯತೆ: ಮಾನಪ್ಪ ವಜ್ಜಲ - ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ ಸುದ್ದಿ 2020

ರಾಷ್ಟ್ರದ ಏಕೈಕ ಚಿನ್ನದ ಗಣಿ ಪ್ರದೇಶ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ ಹೇಳಿದರು.

ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ
ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ

By

Published : Dec 22, 2020, 10:25 AM IST

ರಾಯಚೂರು: ಲಿಂಗಸುಗೂರು ತಾಲೂಕು ಹಟ್ಟಿ ಪಟ್ಟಣ ಪಂಚಾಯಿತಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ ಹೇಳಿದರು.

ಡಿ.21ರಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನದಷ್ಟು ಹಳೆಯ, ರಾಷ್ಟ್ರದ ಏಕೈಕ ಚಿನ್ನದ ಗಣಿ ಪ್ರದೇಶದಿಂದ ಸಾಕಷ್ಟು ಅನುದಾನ ಸರ್ಕಾರ ಬಳಸಿದೆ. ಆದರೆ, ಸ್ಥಳೀಯ ಅಭಿವೃದ್ಧಿಗೆ ಯಾರೂ ಮುಂದಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ

ಕರ್ತವ್ಯದಲ್ಲಿರುವಾಗಲೇ ಮೃತರಾದ, ಅನಾರೋಗ್ಯ ಕಾರಣದಿಂದ ದುಡಿಯಲು ಅಸಾಧ್ಯವಾದ, ಸ್ವಯಂ ನಿವೃತ್ತಿ ಹೊಂದಿದಂತೆ ಅನೇಕ ಜನರಿಗೆ ಉದ್ಯೋಗ ಕೊಡಲು ಚಿಂತನೆ ನಡೆದಿದ್ದು ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತೆ ಎಂದರು.

ಓದಿ:ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ವಜ್ಜಲ್​ ಬಳಿ 16 ಜೀವಂತ ಗುಂಡುಗಳು ಪತ್ತೆ: ಮಾಜಿ ಶಾಸಕ ಪೊಲೀಸ್​ ವಶಕ್ಕೆ

ಹಟ್ಟಿ ಕಂಪನಿಯ ಲಾಭಾಂಶದಲ್ಲಿ ನೀಡಲಾಗುವ ಬೋನಸ್ ರೂ. 16800 ಪ್ರತಿ ಕಾರ್ಮಿಕರ ಖಾತೆಗೆ ನಾಲ್ಕು ದಿನಗಳಲ್ಲಿ ಪಾವತಿಸಲು ಸೂಚಿಸಲಾಗಿದೆ. ಸದ್ಯ ಉತ್ಪಾದನೆಗೊಳ್ಳುವ 6 ಕಿ.ಗ್ರಾಂ ಚಿನ್ನವನ್ನು 12 ರಿಂದ 14 ಕಿ.ಗ್ರಾಂನಷ್ಟು ಉತ್ಪಾದನೆ ಮಾಡುವ ಕುರಿತು ವಿಶೇಷ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಹಟ್ಟಿ ಚಿನ್ನದ ಗಣಿಗೆ ಪ್ರತ್ಯೇಕವಾಗಿ ಕೃಷ್ಣಾ ನದಿಯಿಂದ ಕುಡಿಯುವ ನೀರು ತರಲು ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಿದೆ. ಅಲ್ಲದೆ ಹಟ್ಟಿ ಪಟ್ಟಣ ಸೇರಿದಂತೆ ಗಣಿ ವ್ಯಾಪ್ತಿ ಗ್ರಾಮಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದು ಹಟ್ಟಿ ಸೌಂದರ್ಯೀಕರಣಕ್ಕೆ ಚಿಂತನೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details