ರಾಯಚೂರು:ಇಲ್ಲಿನ ಜವಾಹರ್ ನಗರದ ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಹರಿದಾಸ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಇಂದು ನಡೆಯಿತು.
ಮಾನವ ಹುಟ್ಟಿದ ಮೇಲೆ ದೇವರನ್ನು ಆರಾಧಿಸಬೇಕು.. ವಿಶ್ವೇಶತೀರ್ಥ ಸ್ವಾಮೀಜಿ - The Swamiji of Vishwasthithar Swamiji of the Pejavar Math
ಮಾನವ ಹುಟ್ಟಿದ ಮೇಲೆ ದೇವರನ್ನು ಆರಾಧಿಸಬೇಕು. ಲೋಕ ಕಲ್ಯಾಣಕ್ಕೆ ದೇವರು ಆಶೀರ್ವದಿಸುತ್ತಾನೆ. ಅದರ ಪ್ರತಿಯಾಗಿ ನಾವು ದೇವರಿಗೆ ಪ್ರಿಯರಾಗಬೇಕು ಎಂದು ಹೇಳಿದರು. ಮಂತ್ರಾಲಯದಲ್ಲಿ ವರ್ಷಪೂರ್ತಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ನಡೆಸಿ ಲೋಕ ಕಲ್ಯಾಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಾನವ ಹುಟ್ಟಿದ ಮೇಲೆ ದೇವರನ್ನು ಆರಾಧಿಸಬೇಕು. ಲೋಕ ಕಲ್ಯಾಣಕ್ಕೆ ದೇವರು ಆಶೀರ್ವದಿಸುತ್ತಾನೆ. ಅದರ ಪ್ರತಿಯಾಗಿ ನಾವು ದೇವರಿಗೆ ಪ್ರಿಯರಾಗಬೇಕು ಎಂದು ಹೇಳಿದರು.ಮಂತ್ರಾಲಯದಲ್ಲಿ ವರ್ಷಪೂರ್ತಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ನಡೆಸಿ ಲೋಕ ಕಲ್ಯಾಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಮಂತ್ರಾಲಯದ ಸುಭುದೇಂದ್ರ ತೀರ್ಥರು ಮಕ್ಕಳಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ನೆರವಿನ ಹಸ್ತ ನೀಡುತ್ತಿರುವುದು ಅಭಿನಂದನೀಯ. ಅವರು ಮುಂದೆಯೂ ಹೆಚ್ಚಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು. ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಗಿರಿರಾಜ ಆಚಾರ್ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.