ಕರ್ನಾಟಕ

karnataka

ETV Bharat / state

ಗುರುರಾಯರಿಗಿಂದು ಮಹಾ ಪಂಚಾಮೃತ ಅಭಿಷೇಕ

ರಾಯರ 348ನೇ ಆರಾಧನಾ ಮಹೋತ್ಸವ ಸಂಭ್ರಮ ನರೆವೇರುತ್ತಿದ್ದು, ಇಂದು ನಡೆಯಲಿರುವ ಮಹಾ ಪಂಚಾಮೃತ ಅಭಿಷೇಕಕ್ಕೆ ಲಕ್ಷಾಂತರ ಭಕ್ತ ಸಮೂಹ ಸಾಕ್ಷಿಯಾಗಲಿದ್ದಾರೆ.

ರಾಯರ 348 ನೇ ಆರಾಧನಾ ಮಹೋತ್ಸವ ಸಂಭ್ರಮ

By

Published : Aug 17, 2019, 9:44 AM IST

ರಾಯಚೂರು:ಗುರು ರಾಘವೇಂದ್ರ ಸ್ವಾಮಿಗಳ 348 ನೇ ಆರಾಧನಾ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು, ಇಂದು ಮಧ್ಯಾರಾಧನೆ ನಡೆಯಲಿದೆ.

ಹೌದು, ಇಂದು ರಾಯರ ಬೃಂದಾವನಸ್ಥಾರಾದ ದಿನವಾಗಿದ್ದು, ತಿರುಪತಿ ತಿರುಮಲ ದೇಗುಲದಿಂದ ರಾಯರಿಗೆ ಶೇಷ ವಸ್ತ್ರ ಸಮರ್ಪಣೆ ಮಾಡಲಾಗುತ್ತದೆ. ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ನೆರವೇರಿಸಲಿದ್ದು, ಬೃಂದಾವನದ ನಾಲ್ಕು ದಿಕ್ಕುಗಳಿಗೆ ಮಹಾ ಪಂಚಾಮೃತ ಅಭಿಷೇಕ ನಡೆಯಲಿದೆ.

ಇದನ್ನು ಓದಿ: ರಾಯರ ಆರಾಧನೆಗೆ ಹರಿದುಬಂದ ಭಕ್ತರು: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಮಂತ್ರಾಲಯ

ಇನ್ನುಈ ಮಹಾ ಪಂಚಾಮೃತ ಅಭಿಷೇಕವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಕೈಗೊಳ್ಳಲಾಗುತ್ತದೆ. ಶ್ರೀ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಅಭಿಷೇಕವನ್ನು ನೆರವೇರಿಸಲಿದ್ದು, ದೇಶದ ನಾನಾ ರಾಜ್ಯಗಳಿಂದ ತರಿಸಲಾದ ಫಲಗಳನ್ನ ಬಳಸಿ ಮಹಾ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಹಾಗಾಗಿ ಲಕ್ಷಾಂತರ ಭಕ್ತ ಸಮೂಹ ಅಭಿಷೇಕವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ABOUT THE AUTHOR

...view details