ರಾಯಚೂರು: ದೃಷ್ಠಿದೋಷದಿಂದ ಬಳಲುತ್ತಿದ್ದು 5 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಗುಜರಾತ್ ಮೂಲದ ಪ್ರಮೋದ್ ಎಂಬವರು ತನ್ನ ಹಾಗೂ ಪತ್ನಿಯ ಆರೋಗ್ಯ ಸುಧಾರಣೆಗೆ ತಿರುಮಲ ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿ ವಿಶೇಷ ಹರಕೆ ಕಟ್ಟಿಕೊಂಡಿದ್ದರಂತೆ. ಈ ಹಿನ್ನೆಲೆಯಲ್ಲಿ ಕಾಲಾನಂತರದಲ್ಲಿ ಇವರ ಆರೋಗ್ಯ ಸುಧಾರಣೆ ಕಂಡಿದೆಯಂತೆ. ಇದೀಗ ಹರಕೆ ತೀರಿಸಲು ವೃದ್ಧ ದಂಪತಿ ಹೊರಟಿದ್ದಾರೆ. ಅದೂ ಕೂಡಾ ದೂರದ ಗುಜರಾತ್‌ನಿಂದ ಪಾದಯಾತ್ರೆಯ ಮೂಲಕವೇ ತಿರುಪತಿಗೆ ತೆರಳುತ್ತಿರುವ ಇವರು ಸದ್ಯ ರಾಯಚೂರು ತಲುಪಿದ್ದಾರೆ.
ಗುಜರಾತ್ನ ತಮ್ಮ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ ಈ ದಂಪತಿ ನಿನ್ನೆ ರಾಯಚೂರಿ ತಲುಪಿದರು. ಈ ವೃದ್ಧ ದಂಪತಿಗೆ 75 ವರ್ಷ ವಯಸ್ಸಾಗಿದೆ. ಇಷ್ಟಿದ್ದರೂ ಪ್ರತಿನಿತ್ಯ 25ರಿಂದ 28 ಕಿಲೋ ಮೀಟರ್‌ವರೆಗೆ ಕಾಲ್ನಡಿಗೆ ಪಯಾಣ ಮಾಡುತ್ತಿದ್ದಾರೆ. ಈವರೆಗೆ 2,219 ಕಿ.ಮೀ.ವರೆಗೆ ಪಾದಯಾತ್ರೆ ಮುಗಿಸಿದ್ದಾರೆ.