ಕರ್ನಾಟಕ

karnataka

ETV Bharat / state

ಕೃಷ್ಣಾ ನದಿ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿವೆ ಸೇತುವೆ ಗಾರ್ಡ್ ಸ್ಟೋನ್ಸ್​​ - ಗಾರ್ಡ್ ಸ್ಟೋನ್​

ಕೃಷ್ಣಾ ನದಿ ಪ್ರವಾಹದಿಂದ ಮುಳುಗಡೆ ಆಗಿರುವ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮೇಲಿನ ಗಾರ್ಡ್ ಸ್ಟೋನ್ಸ್ ನೀರಿನ ರಭಸಕ್ಕೆ ಶಿಥಿಲಗೊಂಡು ಕೊಚ್ಚಿ ಹೋಗುತ್ತಿವೆ.

guard stones fell down from bridge in lingasuguru
ಕೃಷ್ಣಾ ನದಿ ಪ್ರವಾಹ

By

Published : Oct 17, 2020, 2:47 PM IST

ಲಿಂಗಸುಗೂರು/ ರಾಯಚೂರು:ಕೃಷ್ಣಾ ನದಿ ಪ್ರವಾಹದಿಂದಾಗಿ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮೇಲಿನ ಗಾರ್ಡ್ ಸ್ಟೋನ್ಸ್ ಉರುಳಿ ಹೋಗಿವೆ.

ಕೃಷ್ಣಾ ನದಿ ಪ್ರವಾಹ

ಕಳೆದ ವರ್ಷ ಕೃಷ್ಣಾ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯನ್ನು ಇತ್ತೀಚೆಗೆ ದುರಸ್ತಿ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದ ಇದೀಗ ಗಾರ್ಡ್ ಸ್ಟೋನ್​ಗಳು ಅಲ್ಲಲ್ಲಿ ಉರುಳಿಬಿದ್ದು ನೇತಾಡುತ್ತಿವೆ. ಕೆಲವೆಡೆ ಗಾರ್ಡ್ ಸ್ಟೋನ್​​ಗಳು ಕೊಚ್ಚಿ ಹೋಗಿದ್ದು, ಸುತ್ತಲಿನ ಜನ ಅಪಾಯ ಎದುರಾಗುವ ಆತಂಕದಲ್ಲಿದ್ದಾರೆ.

ಶುಕ್ರವಾರ ಮಧ್ಯರಾತ್ರಿಯಿಂದ ನಾರಾಯಣಪುರ ಅಣೆಕಟ್ಟೆ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಶನಿವಾರ ಅಣೆಕಟ್ಟೆ ನೀರು ಸಂಗ್ರಹ ಸಾಮರ್ಥ್ಯ 492.252 ಮೀಟರ್ ಇದ್ದು, ಸದ್ಯ 491.370 ಮೀಟರ್ ನೀರಿನ ಮಟ್ಟ ಕಾಯ್ದುಕೊಂಡು, 22 ಕ್ರಸ್ಟ್ ಗೇಟ್​ಗಳ ಮೂಲಕ 2.17 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ ಎಂದು ಇಂಜಿನಿಯರ್ ವಿಜಯಕುಮಾರ ಅರಳಿ ತಿಳಿಸಿದ್ದಾರೆ.

ABOUT THE AUTHOR

...view details