ರಾಯಚೂರು: ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ತಾಲೂಕು, ಗ್ರಾಮಗಳಲ್ಲಿ ಶಿರಸ್ತೆದಾರರನ್ನು ನೇಮಕ ಮಾಡಲಾಗಿದೆ.
ನೆರೆ ಪೀಡಿತ ಜನರ ಸಹಾಯಕ್ಕಾಗಿ ಸರ್ಕಾರಿ ಅಧಿಕಾರಿಗಳ ನೇಮಕ - ಕೃಷ್ಣಾ ನದಿ
ರಾಯಚೂರಿನ ನೆರೆ ಸಂತ್ರಸ್ತ ತಾಲೂಕು, ಗ್ರಾಮಗಳಿಗೆ ಸಹಾಯವಾಗಲೆಂದು ಸರ್ಕಾರ ಶಿರಸ್ತೆದಾರರನ್ನುನೇಮಕ ಮಾಡಿಕೊಂಡಿದೆ. ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯದ ಅಗತ್ಯವಿದೆ.
![ನೆರೆ ಪೀಡಿತ ಜನರ ಸಹಾಯಕ್ಕಾಗಿ ಸರ್ಕಾರಿ ಅಧಿಕಾರಿಗಳ ನೇಮಕ](https://etvbharatimages.akamaized.net/etvbharat/prod-images/768-512-4092272-thumbnail-3x2-rch.jpg)
ಸರ್ಕಾರಿ ನೇಮಕ
ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚಾಗಿ ನೀರು ಬಿಡಲಾಗಿದೆ. ಈ ಕಾರಣ ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಅಲ್ಲದೇ ಸಂಘ, ಸಂಸ್ಥೆಗಳು ಸಂತ್ರಸ್ಥರಿಗೆ ಸಹಾಯ ಧನ ನೀಡಲು ಅನುಕೂಲ ಮಾಡಿಕೊಟ್ಟಿದ್ದು. ವೈಯಕ್ತಿಕ ಹಾಗೂ ಸಂಘಟನೆ ಮೂಲಕ ನೆರವು ನೀಡಬಹುದಾಗಿದೆ. ಅಲ್ಲದೇ ಸಿಎಂ ಖಾತೆಗೆ ಹಣ ನೀಡಲು ವ್ಯವಸ್ಥೆ ಮಾಡಲಾಗಿದೆ.
Last Updated : Aug 10, 2019, 7:53 AM IST