ಕರ್ನಾಟಕ

karnataka

ETV Bharat / state

ಪತಿಯನ್ನ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪತ್ನಿ ಒತ್ತಾಯ - ಶರಣಮ್ಮ ಅವರ ಪತಿಯ ಕೊಲೆ ಪ್ರಕರಣ ಲೆಟೆಸ್ಟ್ ಅಪ್​ಡೇಟ್ಸ್

ನನ್ನ ಪತಿಯನ್ನ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೊಲೆಗೀಡಾದ ವ್ಯಕ್ತಿಯ ಪತ್ನಿ ಶರಣಮ್ಮ ಒತ್ತಾಯಿಸಿದ್ದಾರೆ.

Give punishment to the accused who murdered my husband : Sharanamma
ನನ್ನ ಪತಿಯನ್ನ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ....ಪತ್ನಿ ಶರಣಮ್ಮ ಒತ್ತಾಯ!

By

Published : Feb 21, 2020, 8:25 PM IST

ರಾಯಚೂರು:ನನ್ನ ಪತಿಯನ್ನ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿ ಎಂದು ಕೊಲೆಗೀಡಾಗಿರುವ ವ್ಯಕ್ತಿ ಪತ್ನಿ ಶರಣಮ್ಮ ಒತ್ತಾಯಿಸಿದ್ದಾರೆ.

ನಗರದ ಮಾಧ್ಯಮದವರೊಂದಿಗೆ ಮಾತನಾಡಿದ ಶರಣಮ್ಮ, ಕೆಲ ದಿನಗಳ ಹಿಂದೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಯಂಕಪ್ಪ ಎಂಬಾತನಿಗೂ ನನ್ನ ಪತಿಗೂ ಜಗಳವಾಗಿತ್ತು. ಇದಾದ ಬಳಿಕ ನನ್ನ ಪತಿಯನ್ನ ಹೊಲಕ್ಕೆ ಕರೆದುಕೊಂಡು ಬಂದು ಆದನಗೌಡ, ಹನುಮಂತಗೌಡ, ಮಹಾಂತಗೌಡ, ಶರಣಗೌಡ ಸೇರಿ 6 ಜನ ಸೇರಿಕೊಂಡು ನನ್ನ ಪತಿಯನ್ನ ಕೊಲೆಗೈದಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಮುದಗಲ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದ್ರೆ ಪ್ರಕರಣದಲ್ಲಿ ಕೆಲವರನ್ನ ಬಂಧಿಸಲಾಗಿದ್ದು, ಇನ್ನೂ ಕೆಲವರನ್ನ ಬಂಧಿಸಿಲ್ಲ. ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ರು. ಅಲ್ಲದೇ ದೂರು ನೀಡಿದ ಹಿನ್ನಲೆಯಲ್ಲಿ ತಮಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ರು.

ABOUT THE AUTHOR

...view details