ಕರ್ನಾಟಕ

karnataka

ETV Bharat / state

ಗಣಪತಿ ನಿಮಜ್ಜನ ಮೆರವಣಿಗೆ: ಡಿಜೆಗಾಗಿ ಹೆದ್ದಾರಿಯಲ್ಲಿ ಪ್ರತಿಭಟನೆ - ಈಟಿವಿ ಭಾರತ್​ ಕನ್ನಡ

ಗಣಪತಿ ನಿಮಜ್ಜನದ ವೇಳೆ ಡಿಜೆ ತೆಗೆಯುವಂತೆ ಪೊಲೀಸರು ಹೇಳಿದ್ದಕ್ಕೆ ಗಣಪತಿ ಸಮಿತಿ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು, ರಸ್ತೆ ಮಧ್ಯೆ ಹೋರಾಟ ಮಾಡಿದ ಪ್ರಸಂಗ ರಾಯಚೂರಿನಲ್ಲಿ ನಡೆದಿದೆ.

ganapati-immersion-procession-dj-protest
ಡಿಜೆಗಾಗಿ ಹೆದ್ದಾರಿಯಲ್ಲಿ ಪ್ರತಿಭಟನೆ

By

Published : Sep 3, 2022, 9:01 AM IST

ರಾಯಚೂರು : ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಗಣೇಶ ಮೂರ್ತಿಗಳ ಮೂರು ದಿನದ ನಿಮಜ್ಜನ ದಿನವಾದ ಶುಕ್ರವಾರ ಡಿಜೆ ವಿಚಾರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆದಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಲಿಂಗಸೂಗೂರು ತಾಲೂಕಿನ ಗುರಗುಂಟಾ ಗ್ರಾಮದ ಗಣಪತಿ ನಿಮಜ್ಜನ ವೇಳೆ ಈ‌ ಘಟನೆ ನಡೆದಿದೆ.

ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ಎ ಪಕ್ಕದಲ್ಲಿ ಗಜಾನನ ಯುವಕ ಮಂಡಳಿ ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಿತ್ತು. ಮೂರನೇ ದಿನವಾದ ನಿನ್ನೆ ರಾತ್ರಿ ವೇಳೆ ಮೂರ್ತಿಯನ್ನು ನಿಮಜ್ಜನ ಮಾಡಲು ಟ್ರಾಕ್ಟರ್​ನಲ್ಲಿ ಇರಿಸಿ, ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿದ್ದರು. ಮೆರವಣಿಗೆಯಲ್ಲಿ ಡಿಜೆ ಬಳಸಲಾಗಿತ್ತು. ಮೆರವಣಿಗೆಯಲ್ಲಿ ಡಿಜೆ ಬಳಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಧ್ವನಿ ವರ್ಧಕವನ್ನು ತೆಗೆಯುವಂತೆ ಪೊಲೀಸರು ಯುವಕ ಮಂಡಳಿಗೆ ಹೇಳಿದರು.

ಗಣಪತಿ ನಿಮಜ್ಜನೆ ಮೆರವಣಿಗೆಯಲ್ಲಿ ಡಿಜೆಗಾಗಿ ಹೆದ್ದಾರಿಯಲ್ಲಿ ಪ್ರತಿಭಟನೆ

ಆಗ ಗಜಾನನ ಯುವಕ ಮಂಡಳಿ ಹಾಗೂ ಪೊಲೀಸರ ನಡುವೆ ವಾಗ್ವಾದ ಉಂಟಾಯಿತು. ಗಣೇಶ ಪ್ರತಿಷ್ಠಿತ ಸ್ಥಳದಿಂದ ಕಣ್ಣಳತೆ ದೂರದಲ್ಲಿ ಟ್ರ್ಯಾಕ್ಟರ್‌ನಿಂದ ಮೂರ್ತಿಯನ್ನು ಕೆಳಗಡೆ ಇಳಿಸಿ ಪ್ರತಿಭಟನೆ ಮಾಡಲಾಯಿತು. ಇದಾದ ಬಳಿಕ ಧ್ವನಿ ವರ್ಧಕದ ಶಬ್ಧ ಕಡಿಮೆಗೊಳಿಸಿ ಮತ್ತೆ ಗಣಪತಿಯನ್ನು ನಿಮಜ್ಜನ ಮಾಡಲಾಯಿತು.

ಇದನ್ನೂ ಓದಿ :ರಾಜಧಾನಿಯಲ್ಲಿ ಸೆಪ್ಟೆಂಬರ್ 1 ರಂದು 45 ಸಾವಿರ ಗಣೇಶ ಮೂರ್ತಿಗಳ ನಿಮಜ್ಜನ: ಬಿಬಿಎಂಪಿ

ABOUT THE AUTHOR

...view details