ರಾಯಚೂರು:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ವಿವಿಧೆಡೆ ರಾಜಾರೋಷವಾಗಿ ಜೂಜಾಟ ನಡೆಯುತ್ತಿದೆ. ಇಷ್ಟೊಂದು ಇಸ್ಪೀಟ್ ಆಟವನ್ನ ಆಡ್ತಾಯಿದ್ರೂ ಜಿಲ್ಲೆಯಲ್ಲಿ ಪೊಲೀಸರು ಇದ್ದಾರೋ ಇಲ್ವೋ ಅನ್ನೋ ಪ್ರಶ್ನೆ ಕಾಡ್ತಿದೆ.
ಯಕ್ಕಾ-ರಾಜಾ-ರಾಣಿ ಕೈಯೊಳಗೆ.. ರಾಯಚೂರಿನಲ್ಲಿ ಹಿಡಿಮಣ್ಣು ಸೋತವರ ಬಾಯೊಳಗೆ.. - Jurisdiction of Mudgal Station
ಗರಿ ಗರಿ ನೋಟು ಎಣಿಸ್ತಾರೆ. ಕಾರ್ಡ್ ಬಿದ್ದಂಗೆ ಗೆದ್ದವನ ಮುಖ ಅರಳುತ್ತೆ, ಸೋತವರು ಹರಳೆಣ್ಣೆ ಕುಡಿದಂತೆ ಆಡ್ತಾರೆ. ಇಲ್ಲಿ ಅಂದರ್ ಬಾಹರ್.. ಅಂದರ್ ಬಾಹರ್ ಬಲು ಜೋರ್ ಜೋರಾಗಿಯೇ ನಡೆಯುತ್ತೆ.
Gambling is happening in Raichur
ಜಿಲ್ಲೆಯ ಮುದಗಲ್ ಠಾಣೆ ವ್ಯಾಪ್ತಿಯ ಕೆರೆಯೊಂದರ ಬಳಿ ಕದ್ದುಮುಚ್ಚಿಯೇನಲ್ಲ, ರಾಜಾರೋಷವಾಗಿ ಜೂಜಾಟ ಆಡ್ತಿರೋ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.ಮುದಗಲ್ ಪಟ್ಟಣದ ಹತ್ತಿರದ ಗ್ರಾಮವೊಂದರ ಹೊಲದಲ್ಲಿ ಅಂದರ್-ಬಾಹರ್ ಜೂಜಾಟ ನಡೆಯುತ್ತೆ. ನಿತ್ಯ ಲಕ್ಷಾಂತರ ರೂಪಾಯಿ ಜೂಜಾಟದಲ್ಲಿ ಹರಿದಾಡುತ್ತೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಜನ ಜೂಜಾಟದ ದೃಶ್ಯ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಪೊಲೀಸರು ಇನ್ನಾದ್ರೂ ಕ್ರಮಕೈಗೊಳ್ತಾರಾ ನೋಡಬೇಕು.