ಕರ್ನಾಟಕ

karnataka

ETV Bharat / state

ರಾಯಚೂರಿನ ಯುವಕ ಸಾವು ಪ್ರಕರಣ: ಎಸ್ಪಿ ವೇದಮೂರ್ತಿ ಸ್ಪಷ್ಟನೆ ಏನು? - ಗಬ್ಬೂರು ಗ್ರಾಮ

ರಾಯಚೂರು ಜಿಲ್ಲೆಯ ಗಬ್ಬೂರು ಗ್ರಾಮದಲ್ಲಿ ಶಿವು ಎಂಬ ಯುವಕ ಸಾವನ್ನಪ್ಪಿದ ವಿಚಾರವಾಗಿ ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ

By

Published : Sep 16, 2019, 1:05 AM IST

ರಾಯಚೂರು:ಗಬ್ಬೂರು ಗ್ರಾಮದಲ್ಲಿ ಶಿವು ಎಂಬ ಯುವಕ ಸಾವನ್ನಪ್ಪಿದ ವಿಚಾರವಾಗಿ ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಯುವಕ ಮೂರ್ಛೆ ರೋಗದಿಂದ ಕುಸಿದು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಗಬ್ಬೂರು ಗ್ರಾಮದಲ್ಲಿ ನಡೆದ ಗಣೇಶ ನಿಮಜ್ಜನದ ವೇಳೆ ಶಿವುನ ಬೈಕ್‌‌ನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು. ಆದರೆ ಆ ಬೈಕ್​ನ್ನು ಪುನಃ​ ತರಲೆಂದು ಶಿವು ಠಾಣೆಗೆ ಹೋಗಿದ್ದಾನೆ. ವಿಚಾರಣೆ ವೇಳೆ ಶಿವುಗೆ ಮೂರ್ಛೆ ಬಂದು ಕುಸಿದು ಬಿದ್ದಿದ್ದಾನೆ. ಆಗ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವು ಮೃತಪಟ್ಟಿದ್ದಾನೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದರು.

ಎಸ್ಪಿ ಡಾ. ಸಿ ಬಿ ವೇದಮೂರ್ತಿ ಸ್ಪಷ್ಟನೆ

ತಮ್ಮ ಮಗನ ಸಾವಿಗೆ ಪೊಲೀಸರೇ ಕಾರಣ ಆರೋಪ:ಕಲ್ಲು ತೂರಿ ಪೋಷಕರ ಆಕ್ರೋಶ

ಆದರೆ ಶಿವುಗೆ ಪಿಎಸ್‌ಐ ಹಲ್ಲೆ ಮಾಡಿದ್ದಾರೆ ಎನ್ನುವ ಅನುಮಾನದಿಂದ ಗ್ರಾಮಸ್ಥರು ಉದ್ರಿಕ್ತಗೊಂಡು ಗಲಾಟೆ ನಡೆಸಿದ್ದರು. ಸದ್ಯ ಗ್ರಾಮದ ಬಿಗುವಿನ ವಾತಾವರಣವನ್ನ ಹತೋಟಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

ABOUT THE AUTHOR

...view details