ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಕಪ್ಪು ಮಂಗ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ, ಗ್ರಾಮಸ್ಥರೆಲ್ಲ ಸೇರಿ ಹಿಂದೂ ಧಾರ್ಮಿಕ ಆಚರಣೆ ಪ್ರಕಾರ ಪೂಜಾ ಕೈಂಕರ್ಯ ನೆರವೇರಿಸಿದರು.
ವಿದ್ಯುತ್ ಸ್ಪರ್ಶದಿಂದ ಕಪ್ಪು ಮಂಗ ಸಾವು ಓದಿ: ರೇಖಾ ಕದಿರೇಶ್ Murder Case: ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಚುರುಕು
ಕಪ್ಪು ಮಂಗ ಹೆಣ್ಣಾಗಿದ್ದರಿಂದ ಸೀರೆ ಕುಪ್ಪಸ ತೊಡಿಸಿ ದಂಡೆ ಹಾಕಿ ಆರತಿ ಬೆಳಗಿದರು. ನಂತರ ಗ್ರಾಮದ ಬೀದಿಗಳಲ್ಲಿ ಭಾಜಾ ಭಜಂತ್ರಿ ಮೆರವಣಿಗೆ ಮೂಲಕ ಹನುಮಂತ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳಡಿ ಅಂತ್ಯಕ್ರಿಯೆ ನಡೆಸಲಾಯಿತು. ಮಹಿಳೆಯರು, ಮಕ್ಕಳು ಹನುಮ ನಾಮಸ್ಮರಣೆ ಮಾಡುತ್ತ ಕಣ್ಣೀರಿಟ್ಟ ಚಿತ್ರಣ ಕಂಡುಬಂತು. ಗ್ರಾಮಸ್ಥರೆಲ್ಲ ದೇವಸ್ಥಾನದಲ್ಲಿ ಸೇರಿ ಅಂತಿಮ ನಮನ ಸಲ್ಲಿಸಿದರು.
ಮಂಗಗಳು ಹನುಮಂತ ದೇವರ ಸ್ವರೂಪಿಗಳು, ದುರ್ಘಟನೆಯಿಂದ ಗ್ರಾಮಕ್ಕೆ ಕೆಟ್ಟದಾಗಬಾರದು ಎಂದು ಸಾಂಪ್ರದಾಯಿಕ ಆಚರಣೆಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದರು.