ರಾಯಚೂರು: ನಗರದಲ್ಲಿ ಇಂದು ಶಾಸಕ ಡಾ.ಶಿವರಾಜ್ ಪಾಟೀಲ್ ಬಡವರಿಗೆ ಉಚಿತವಾಗಿ ಹಾಲು ವಿತರಣೆ ಮಾಡಿದ್ರು.
ರಾಯಚೂರಲ್ಲಿ ಉಚಿತ ಹಾಲು ವಿತರಣೆ; ನಡುವೆ ಅಂತರ ಮರೆತ ಜನರಿಗೆ ಲಾಠಿ ಬಿಸಿ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಉಚಿತ ಹಾಲು ವಿತರಣೆ ಮಾಡಬೇಕು ಎನ್ನುವ ಸರ್ಕಾರದ ಆದೇಶದ ಮೆರೆಗೆ ಹರಿಜನವಾಡ, ಜಹಿರಬಾದ್ ಸೇರಿದಂತೆ ನಾನಾ ಕಡೆಗಳಲ್ಲಿ ಉಚಿತ ಹಾಲು ವಿತರಣೆ ಮಾಡಲಾಯಿತು.
rcr
ಲಾಕ್‌ಡೌನ್ ಹಿನ್ನಲೆಯಲ್ಲಿ ಬಡವರಿಗೆ ಉಚಿತ ಹಾಲು ವಿತರಣೆ ಮಾಡಬೇಕಂಜು ಸರ್ಕಾರದ ಆದೇಶವಿದೆ. ಹಾಗಾಗಿ ಹರಿಜನವಾಡ, ಜಹಿರಬಾದ್ ಸೇರಿದಂತೆ ನಾನಾ ಕಡೆಗಳಲ್ಲಿ ಸುಮಾರು ಮೂರುವರೆ ಸಾವಿರ ಲೀಟರ್ ಹಾಲು ಒದಗಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಎಷ್ಟೇ ಹೇಳಿದ್ರೂ, ಮುಗಿಬಿದ್ದು ಹಾಲಿನ ಪ್ಯಾಕೆಟ್ ಕಸಿದುಕೊಂಡು ಹೋಗುವ ದೃಶ್ಯ ಕಂಡು ಬಂತು. ಈ ವೇಳೆ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಬೇಕಾಯ್ತು.