ಕರ್ನಾಟಕ

karnataka

ETV Bharat / state

ಗಂಡನಿಗೆ ಗಂಡಾಂತರ ಇದೆ ಎಂದು ನಂಬಿಸಿ 6 ತೊಲ ಬಂಗಾರ ದೋಚಿದ ನಕಲಿ ಸ್ವಾಮೀಜಿ - ರಾಯಚೂರು ಜಿಲ್ಲಾ ಸುದ್ದಿ

ಗಂಡಾಂತರವಿರುವುದಾಗಿ ಹೇಳಿ ವಿಶೇಷ ಪೂಜೆ ಮಾಡುವುದಾಗಿ ನಂಬಿಸಿ ನಗದು ಮತ್ತು ಚಿನ್ನಾಭರಣದೊಂದಿಗೆ ನಕಲಿ ಸಾಧು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.

ನಕಲಿ ಸಾಧುನಿಂದ ಗೃಹಿಣಿಗೆ ವಂಚನೆ

By

Published : Aug 30, 2019, 11:31 PM IST

ರಾಯಚೂರು: ವ್ಯಕ್ತಿಯೊರ್ವ ಸಾಧು ವೇಷದಲ್ಲಿ ಬಂದು ಪೂಜೆಯ ನೆಪದಲ್ಲಿ ನಗದು ಹಣ, ಚಿನ್ನಾಭರಣವನ್ನು ಹಾಡುಹಗಲೇ ಲಪಾಟಾಯಿಸಿರುವ ಪ್ರಸಂಗ ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ ಮುಕ್ತಲ್ ಪೇಟೆಯ ಬಡಾವಣೆಯಲ್ಲಿ ಗಂಡಾಂತರ ವಿರುವುದಾಗಿ ಹೇಳಿ ಪದ್ಮಾ ಎಂಬುವವರಿಗೆ ನಕಲಿ ಸಾಧು ಮೋಸಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ. ಪದ್ಮಾರವರ ಮನೆ ಬಾಗಿಲಿಗೆ ಬಂದ ನಕಲಿ ಸಾಧು ಮನೆಯಲ್ಲಿ ಗಂಡಾಂತರ ಎದುರಾಗಲಿದ್ದು ಪೂಜೆ ಮಾಡದಿದ್ದರೆ ಪತಿ ಜೀವಕ್ಕ ಕಂಟಕವಿದೆ ಎಂದು ಹೇಳಿ ವಿಶೇಷ ಪೂಜೆ ಮಾಡಬೇಕೆಂದು ನಂಬಿಸಿದ್ದಾನೆ.

ನಕಲಿ ಸಾಧುನಿಂದ ಗೃಹಿಣಿಗೆ ವಂಚನೆ

ಇನ್ನೂ ಪೂಜೆಗಾಗಿ 60 ಗ್ರಾಂ ಬಂಗಾರ ತರುವಂತೆ ಹೇಳಿದ್ದಾನೆ. ಇಲ್ಲದಿದ್ದರೆ ಪತಿಯ ಜೀವಕ್ಕೆ ಅಪಾಯವಿದೆ ಎಂದು ಹೆದರಿಸಿದ್ದಾನೆ. ಇದರಿಂದ ಸಂಬಂಧಿಕರ ಮೂರು ತೊಲೆ ಬಂಗಾರವನನ್ನು ಪದ್ಮಾ ಪೂಜೆಗೆ ಇಟ್ಟಿದ್ದಾಳೆ. ಸಾಧು ತಂದ ಬಾಕ್ಸ್​ ಒಳಗೆ ಬಂಗಾರ ವಿಟ್ಟು ಪೂಜೆ ಮಾಡಿ, 10 ಸಾವಿರ ರೂಪಾಯಿ ಪಡೆದು ತಾನು ಹೋದ ನಂತರ ಬಾಕ್ಸ್ ತೆಗೆಯಲು ಹೇಳಿದ್ದಾನೆ.

ನಕಲಿ ಸಾಧು ಹೋದ ನಂತರ ಬಾಕ್ಸ್ ತೆಗೆದು ನೋಡಿದಾಗ ಬಾಕ್ಸ್​ನಲ್ಲಿ ಅಕ್ಕಿ ಇರುತ್ತದೆ ಇದರಿಂದ ಮೋಸ ಹೋಗಿರುವುದು ತಿಳಿದು ಬಂದಿದೆ. ನಕಲಿ ಸ್ವಾಮಿಗಾಗಿ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಸದ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ.

ABOUT THE AUTHOR

...view details