ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತ: ದುಬೈನಲ್ಲಿ ರಾಯಚೂರಿನ ಒಂದೇ ಕುಟುಂಬದ ನಾಲ್ವರ ಸಾವು - Dubai road accident

ಮೆಕ್ಕಾಗೆ ತೆರಳಿದ ಕುಟುಂಬ ಸಾವು- ದುಬೈ ಅಪಘಾತಕ್ಕೆ ರಾಯಚೂರಿನ ನಾಲ್ವರು ಬಲಿ- ಮಂಗಳವಾರ ನಡೆದಿದ್ದ ದುರ್ಘಟನೆ

Etv Bharat
Etv Bharat

By

Published : Feb 23, 2023, 1:29 PM IST

ರಾಯಚೂರು:ಮೆಕ್ಕಾಗೆ ತೆರಳಿದ್ದ ನಗರದ ಒಂದೇ ಕುಟುಂಬದ ನಾಲ್ವರು ದುಬೈನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದು, ಓರ್ವ ಗಾಯಗೊಂಡ ಘಟನೆ ನಡೆದಿದೆ. ಮೃತರನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಶಾಫಿ ಸುಳ್ಳೇದ್​ (53), ಅವರ ಪತ್ನಿ ಸಿರಾಜ್ ಬೇಗಂ (47), ಮಗಳು ಶಿಫಾ (20) ಮತ್ತು ತಾಯಿ ಬೀಬಿ ಜಾನ್ (64) ಎಂದು ಗುರುತಿಸಲಾಗಿದೆ.

ಮೃತ ಶಫಿ ಸುಳ್ಳೇದ್​ ಅವರ ಪುತ್ರ ಸಮೀರ್ ತೀವ್ರವಾಗಿ ಗಾಯಗೊಂಡಿದ್ದು, ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಚೂರು ಎಸ್​ಪಿ ಬಿ.ನಿಖಿಲ್ ತಿಳಿಸಿದ್ದಾರೆ. ಉಮ್ರಾ ಮಾಡಲು ಹೋಗಿ ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ನಾಲ್ವರು ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಕುಟುಂಬದ ಐವರು ಫೆಬ್ರವರಿ 14 ರಂದು ರಾಯಚೂರಿನಿಂದ ಮೆಕ್ಕಾಗೆ ತೆರಳಿಧ್ದರು. ದುಬೈನಲ್ಲಿ ಫೆಬ್ರವರಿ 21 ಸಂಜೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಕುಟುಂಬವಿದ್ದ ಬಸ್ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದೆ. ಅಧಿಕಾರಿಗಳು ಸಂತ್ರಸ್ತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ಗುಂಡುಹಾರಿಸಿ ರೌಡಿಶೀಟರ್​ನನ್ನು ಬಂಧಿಸಿದ ಧೀರೆ.. ಮಹಿಳಾ ಎಸ್​ಐ ಮೀನಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ABOUT THE AUTHOR

...view details