ಲಿಂಗಸುಗೂರು: ಲಿಂಗಸುಗೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನ ಪಶು ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಪೂಜೆ ಸಲ್ಲಿಸಲಾಯಿತು.
ನೂತನ ಪಶು ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಡಿ.ಎಸ್. ಹೂಲಗೇರಿ ಭೂಮಿ ಪೂಜೆ - veternary hospital
ಲಿಂಗಸುಗೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಆಸ್ಪತ್ರೆಗಳ ನಿರ್ಮಾಣಕ್ಕೆ ಅನಮೋದನೆ ದೊರೆತಿದ್ದು, ಇಂದು ನೂತನ ಪಶು ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಿ.ಎಸ್. ಹೂಲಗೇರಿ ಭೂಮಿ ಪೂಜೆ ಸಲ್ಲಿಸಿದರು.

ನೂತನ ಪಶು ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಿ.ಎಸ್. ಹೂಲಗೇರಿ ಭೂಮಿ ಪೂಜೆ ಸಲ್ಲಿಸಿದರು. ಕ್ಷೇತ್ರ ವ್ಯಾಪ್ತಿಗೆ ಆರ್ಐಡಿಎಫ್ ಯೋಜನೆಯಡಿ ನಬಾರ್ಡ್ ಸಹಕಾರದೊಂದಿಗೆ ರಾಜ್ಯದಲ್ಲಿ 181 ಪಶು ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಈ ಪೈಕಿ ಕ್ಷೇತ್ರದಲ್ಲಿ ನಾಲ್ಕು ಕಟ್ಟಡಗಳಿಗೆ ಅನುಮತಿ ದೊರೆತಿದೆ. ಮಾಕಾಪುರ, ಆಮದಿಹಾಳ, ಮಾವಿನಭಾವಿ, ಲಿಂಗಸುಗೂರ ಒಟ್ಟು ನಾಲ್ಕು ಆಸ್ಪತ್ರೆಗಳಿಗೆ ತಲಾ ರೂ 43 ಲಕ್ಷ ಮಂಜೂರಾಗಿದೆ. ಸರ್ಕಾರ ಎನ್.ಪಿ.ಸಿ.ಸಿ ಸಂಸ್ಥೆಗೆ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದು ಶಾಸಕ ಹೂಲಗೇರಿ ಮಾಹಿತಿ ನೀಡಿದರು.
ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧನಿರುವೆ. ಸಾರ್ವಜನಿಕರು ಸರ್ಕಾರ ತರುವ ಯೋಜನೆಗಳ ಸದ್ಭಳಕೆಗೆ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.