ರಾಯಚೂರು :ಜಿಲ್ಲೆಯಲ್ಲಿ ಇಂದು ಕೊರೊನಾ ಶಂಕಿತ ನಾಲ್ವರು ಪತ್ತೆಯಾಗಿದ್ದಾರೆ. ಅವರ ರಕ್ತ ಹಾಗೂ ಗಂಟಲು ದ್ರವವನ್ನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ರಾಯಚೂರಿನಲ್ಲಿ ನಾಲ್ವರು ಕೊರೊನಾ ಶಂಕಿತರ ಪತ್ತೆ.. - ರಕ್ತ, ಗಂಟಲು ದ್ರವ ಪರೀಕ್ಷೆಗೆ
44 ವರದಿಗಳು ನೆಗೆಟಿವ್ ಬಂದಿವೆ. 21 ವರದಿ ಇನ್ನೂ ಬರಬೇಕಿದೆ. ಕ್ವಾರಂಟೈನ್‍ನಲ್ಲಿ 75 ಜನರಿದ್ದಾರೆ.

ರಾಯಚೂರಿನಲ್ಲಿ ನಾಲ್ವರು ಕೊರೊನಾ ಶಂಕಿತರ ಪತ್ತೆ...
ಜಿಲ್ಲೆಯ ಈ ನಾಲ್ವರು ಸೇರಿ ಈವರೆಗೂ 65 ಜನರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಅದರಲ್ಲಿ 44 ವರದಿಗಳು ನೆಗೆಟಿವ್ ಬಂದಿವೆ. 21 ವರದಿಗಳು ಇನ್ನೂ ಬರಬೇಕಿದೆ. ಕ್ವಾರಂಟೈನ್‍ನಲ್ಲಿ 75 ಜನರಿದ್ದಾರೆ.
ಜಿಲ್ಲೆಯಿಂದ ಈವರೆಗೆ ಯಾವುದೇ ಪಾಸಿಟಿವ್ ವರದಿ ಬಂದಿಲ್ಲ. ಬದಲಾಗಿ ನೆಗೆಟಿವ್ ವರದಿಗಳು ಬಂದಿದ್ದು, ಶಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸದ್ಯ ಆತಂಕ ಮೂಡಿಸಿದೆ.