ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನವರು ನಿಜವಾದ ರಾಮಭಕ್ತರು : ಮಾಜಿ ಸಂಸದ ಉಗ್ರಪ್ಪ - ugrappa

ನೀವು ಕೊಟ್ಟ ಸಮಯ ಮುಗಿದು ಹೋಗಿದೆ. ಈ ಹಿಂದೆ ಹೇಳಿಕೆ ಕೊಡುವಾಗ ಬುದ್ಧಿ ಇರಬೇಕಾಗಿತ್ತು. ಸರ್ಕಾರ ಮಾಡಿದ ತಪ್ಪಿನಿಂದ ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು..

Former MP ugrappa
ಮಾಜಿ ಸಂಸದ ಉಗ್ರಪ್ಪ

By

Published : Apr 7, 2021, 7:15 PM IST

ರಾಯಚೂರು :ನಿಜವಾದ ರಾಮಭಕ್ತರು ಯಾರಾದರೂ ಇದ್ರೆ ಅದು ಕಾಂಗ್ರೆಸ್​ನವರೇ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.

ಜಿಲ್ಲೆಯ ಮಸ್ಕಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ರಾಮಾಯಣ ಓದಿಲ್ಲ. ಆದರೆ, ನಾನು 10 ನಿಮಿಷ ರಾಮಾಯಣ ಓದುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರೀತಿಯಲ್ಲಿ ವಿಫಲರಾಗಿದ್ದಾರೆ. ಮಸ್ಕಿ ಚುನಾವಣೆಯಲ್ಲಿ ಜನ ಯಡಿಯೂರಪ್ಪ, ಮೋದಿ ವಿಚಾರವನ್ನು ಗಮನದಲ್ಲಿ ತೆಗೆದುಕೊಳ್ಳತ್ತಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ವಾಗ್ದಾಳಿ..

5ಎ ಕಾಲುವೆ ಬಗ್ಗೆ ಪ್ರತಾಪ್ ಗೌಡರು ಒಂದು ಮಾತು ಹೇಳಿಲ್ಲ. ಪ್ರತಾಪ್ ಗೌಡರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಯಡಿಯೂರಪ್ಪ, ಶ್ರೀರಾಮುಲು 7.5 ಮೀಸಲಾತಿ ಮಾಡುವುದಾಗಿ ಭರವಸೆ ನೀಡಿ ಮಾಡಿಲ್ಲ. ಸಾರಿಗೆ ನೌಕರರ ಎಲ್ಲಾ ಡಿಮ್ಯಾಂಡ್ ಫುಲ್‌ಫಿಲ್ ಮಾಡುವುದಾಗಿ ಭರವಸೆ ನೀಡಿ ಕಾಲಾವಾಕಾಶ ಪಡೆದಿದ್ದೀರಿ.

ನೀವು ಕೊಟ್ಟ ಸಮಯ ಮುಗಿದು ಹೋಗಿದೆ. ಈ ಹಿಂದೆ ಹೇಳಿಕೆ ಕೊಡುವಾಗ ಬುದ್ಧಿ ಇರಬೇಕಾಗಿತ್ತು. ಸರ್ಕಾರ ಮಾಡಿದ ತಪ್ಪಿನಿಂದ ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

ABOUT THE AUTHOR

...view details