ರಾಯಚೂರು:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿ ಇರುವ ಆದಾಪುರ ಗ್ರಾಮದ ಹೊರವಲಯದ ಇತ್ತೀಚಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಗೆ ಸೆರೆ ಹಿಡಿಯಲು ಇಂದು ಬೋನ್ ಇರಿಸಲಾಗಿದೆ.
ರಾಯಚೂರು: ಬೋನ್ನಲ್ಲಿ ನಾಯಿ ಕೂಡಿಟ್ಟು ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು! - Forest Officers put bone For Leopard Capture
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿಯ ಆದಾಪುರ ಗ್ರಾಮದ ಹೊರವಲಯದಲ್ಲಿ ಇತ್ತೀಚಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಅದನ್ನು ಸೆರೆ ಹಿಡಿಯಲು ಇಂದು ಬೋನ್ ಇರಿಸಲಾಗಿದೆ.
![ರಾಯಚೂರು: ಬೋನ್ನಲ್ಲಿ ನಾಯಿ ಕೂಡಿಟ್ಟು ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು!](https://etvbharatimages.akamaized.net/etvbharat/prod-images/768-512-4887086-thumbnail-3x2-sow.jpg)
ಬೋನ್ನಲ್ಲಿ ನಾಯಿ ಹಾಕಿ ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು!
ಬೋನ್ನಲ್ಲಿ ನಾಯಿ ಹಾಕಿ ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು!
ಇತ್ತೀಚಿಗೆ ಹನುಮಂತಪ್ಪ ಎನ್ನುವ ಕುರಿಗಾಯಿ ತನ್ನ ಕುರಿಗಳನ್ನು ಮೇಯಿಸಲು ಕುರಿಗಳೊಂದಿಗೆ ತೆರಳಿದ್ರು. ಆಗ ಚಿರತೆ ದಾಳಿ ಮಾಡಿ ಕುರಿ ತಿನ್ನಲು ಮುಂದಾಗಿತ್ತು. ಆಗ ಮೂರ್ನಾಲ್ಕು ನಾಯಿಗಳು ಚಿರತೆಗೆ ಭಯ ಹುಟ್ಟಿಸಿ, ಓಡಿಸಿದ್ದವು. ಹೀಗಾಗಿ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದವು. ಈ ಘಟನೆ ಆದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಮೂಡಿಸಿತ್ತು.
ಸದ್ಯ, ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನ್ನಲ್ಲಿ ನಾಯಿ ಕೂಡಿಟ್ಟು ಚಿರತೆ ಸೆರೆಗೆ ಮುಂದಾಗಿದ್ದಾರೆ.