ರಾಯಚೂರು: ಬಾಡಿಗೆ ನೀಡದಿದ್ದಕ್ಕೆ ವಿದ್ಯಾರ್ಥಿಗಳನ್ನ ಕೂಡಿ ಹಾಕಿ ಕಟ್ಟಡ ಮಾಲೀಕ ದೌರ್ಜನ್ಯ ಮೆರೆದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನಡೆದಿದೆ.
ಯಾರ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ... ಹಾಸ್ಟೆಲ್ ಬಾಡಿಗೆ ನೀಡದಿದ್ದಕ್ಕೆ ಮಕ್ಕಳನ್ನೇ ಕೂಡಿ ಹಾಕಿದ! - undefined
ಬಾಡಿಗೆ ನೀಡದಿದ್ದಕ್ಕೆ ವಿದ್ಯಾರ್ಥಿಗಳನ್ನ ಕೂಡಿ ಹಾಕಿ ಕಟ್ಟಡ ಮಾಲೀಕ ದೌರ್ಜನ್ಯ ಮೆರೆದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನಡೆದಿದೆ.
ಮಕ್ಕಳನ್ನ ಕೂಡಿ ಹಾಕಿ ದೌರ್ಜನ್ಯ ಮೆರೆದ ಮಾಲೀಕ
ಕಳೆದ ಎರಡು ವರ್ಷಗಳಿಂದ ಕಟ್ಟಡ ಬಾಡಿಗೆ ನೀಡದಿದ್ದಕ್ಕೆ ಆಕ್ರೋಶಗೊಂಡ ಮಾಲೀಕ, ನಿಲಯದ ಕಟ್ಟಡದ ಗೇಟ್ಗೆ ಬೀಗ ಹಾಕಿದ್ದಾನೆ. ಕಟ್ಟಡ ಬಾಡಿಗೆ ನೀಡುವವರೆಗೆ ಬೀಗ ತೆಗೆಯುವುದಿಲ್ಲ ಎಂದು ಕಟ್ಟಡದ ಮಾಲೀಕ ಹೆಳಿಕೊಂಡಿದ್ದಾನೆ.
ಅಲ್ಲದೇ ಕಟ್ಟಡದಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ವಸತಿ ನಿಲಯ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳನ್ನ ಒಳಗೆ ಹಾಕಿ ಗೇಟ್ ಬೀಗ ಹಾಕಲಾಗಿತ್ತು. 4 ಗಂಟೆಗಳ ನಂತರ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿನೆ ನಡೆಸಿದ್ದಾರೆ. ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳನ್ನು ಕೊಠಡಿಯೊಳಗೆ ಕೂಡಿ ಹಾಕಿದ್ದು ಭಾರಿ ಅಕ್ರೋಶಕ್ಕೆ ಕಾರಣವಾಗಿದೆ.
Last Updated : Jun 27, 2019, 5:58 PM IST