ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಭೀತಿ ಮತ್ತಷ್ಟು ಬಿಗಡಾಯಿಸಿದೆ. ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನ ಹರಿದು ಬಿಟ್ಟ ಪರಿಣಾಮ ಕೃಷ್ಣ ನದಿಯಿಂದ ಜಿಲ್ಲೆಗೆ ಪ್ರವಾಹ ಭೀತಿ ಮುಂದುವರೆದಿದೆ.
ರಾಯಚೂರಿನ 17 ಗ್ರಾಮಗಳಿಗೆ ಪ್ರವಾಹ ಭೀತಿ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ನಿನ್ನೆಯಿಂದ ಕ್ರಮೇಣವಾಗಿ ನೀರು ನದಿಗೆ ಹರಿದು ಬಿಡುವ ಪ್ರಮಾಣ ಏರಿಕೆಯಾಗುತ್ತಲೇ ಸಾಗುತ್ತಿದೆ. ಇಂದು ಬೆಳಗ್ಗೆ 6.10 ಗಂಟೆಗೆ ಬ್ಯಾರೇಜ್ನ 31 ಗೇಟ್ಗಳ ಮೂಲಕ 3.52 ಲಕ್ಷ ಕ್ಯೂಸೆಕ್ ನೀರನ್ನ ನದಿಗೆ ಹರಿದು ಬಿಡಲಾಗಿದೆ. ಇತ್ತ ನಾರಾಯಣಪುರ ಜಲಾಶಯದಿಂದ ಬೆಳಗ್ಗೆ 6 ಗಂಟೆಗೆೆ 92.880 ಕ್ಯೂಸೆಕ್ ನೀರಿನ್ನು ಹರಿಬಿಡಲಾಗಿದೆ.
ನಾರಾಯಣಪುರ ಜಲಾಶಯದ ನೀರು ಹಾಗೂ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಹರಿಸಲಾಗುತ್ತಿರುವ ನೀರು ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ನದಿಯ ತೀರದಲ್ಲಿ ಸಂಗಮವಾಗಲಿದೆ. ಇದರಿಂದ 4 ಲಕ್ಷ ಕ್ಯೂಸೆಕ್ಕ್ಕೂ ಅಧಿಕ ನೀರು ಕೃಷ್ಣ ನದಿಗೆ ಹರಿಯುತ್ತಿದೆ. ರಾಯಚೂರು ತಾಲೂಕಿನ 17 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ನದಿಯ ಪಾತ್ರದಲ್ಲಿರುವ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಗುರ್ಜಾಪುರ ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರನ್ನ ಸ್ಥಳಾಂತರವಾಗುವಂತೆ ಜಿಲ್ಲಾಡಳಿತ ಮನವಿ ಮಾಡಿದ್ರೂ ಸ್ಪಂದಿಸಿಲ್ಲ. ಗ್ರಾಮಸ್ಥರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಗ್ರಾಮಸ್ಥರಿಗಾಗಿ ಪರಿಹಾರ ಕೇಂದ್ರವನ್ನ ಸಹ ತೆರಯಲಾಗಿದೆ.
ಪ್ರವಾಹ ಭೀತಿಯಿಂದಾಗಿ ಜಿಲ್ಲೆಯ ಎನ್‌ಡಿಆರ್‌ಎಫ್ ತಂಡ ಹಾಗೂ ಸೇನಾ ತಂಡ ಜಿಲ್ಲೆಯಲ್ಲಿ ಬಿಡಾರ ಹೂಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಭೀಮಾ ನದಿಯಲ್ಲಿ ಅಪಾರ ಪ್ರಮಾಣ ನೀರು ಬರುತ್ತಿರುವುದರಿಂದ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.