ಕರ್ನಾಟಕ

karnataka

ETV Bharat / state

ರಾಯಚೂರು ‌ಜಿಲ್ಲೆಯಲ್ಲಿ ಆಪತ್ತು ತಂದ ಪ್ರವಾಹ: ನೀರಿನ ರಭಸಕ್ಕೆ ಕೊಚ್ಚಿ ಹೋದ ಯುವಕ - ರಾಯಚೂರು ಪ್ರವಾಹ ಸುದ್ದಿ

ನಡುಗಡ್ಡೆಯಿಂದ ದನ ಮೇಯಿಸಿಕೊಂಡು ಬರುವ ಹೊತ್ತಿಗೆ ಹಳ್ಳದ ನೀರು ಹೆಚ್ಚಾಗಿ ಯುವಕನೋರ್ವ ಕೊಚ್ಚಿಹೋಗಿರುವ ಘಟನೆ ಚಿಂಚೋಡಿಯಲ್ಲಿ ನಡೆದಿದೆ.

ರಾಯಚೂರು ‌ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಿದೆ.

By

Published : Oct 22, 2019, 2:58 PM IST

ರಾಯಚೂರು:ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಯುವಕ ಸಂತೋಷ ಎಂಬಾತ ನೀರುಪಾಲಾಗಿದ್ದಾನೆ.

ರಾಯಚೂರು ‌ಜಿಲ್ಲೆಯಲ್ಲಿ ಮತ್ತೆ ಪ್ರವಾಹ: ನೀರಲ್ಲಿ ಕೊಚ್ಚಿಹೋದ ಯುವಕ

ಚಿಂಚೋಡಿ ಗ್ರಾಮದ ನದಿ ಅಚೆಗೆ ನಡುಗಡ್ಡೆ ಪ್ರದೇಶಕ್ಕೆ ದನ ಮೇಯಿಸಲು ಯುವಕರು ಹೋಗಿದ್ದರು. ಆದರೆ ಮಧ್ಯಾಹ್ನ ಕೃಷ್ಣಾ ಏಕಾಏಕಿ ನದಿಗೆ 50 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ಬಿಟ್ಟಿದ್ದಾರೆ. ಹೀಗಾಗಿ ದನ ಕಾಯಲು ಹೋದ ನಾಲ್ವರ ನಡುಗಡ್ಡೆಯಲ್ಲಿ ಸಿಲುಕಿದ್ದರು.

ನಡುಗಡ್ಡೆಯಿಂದ ವಾಪಸ್​ ಮನೆಗೆ ಬರುವಾಗ ಸಂತೋಷ್​ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಈತ ಜೊತೆಯಲ್ಲಿದ್ದ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೋಷ್ ದನದ ಬಾಲ ಹಿಡಿದುಕೊಂಡು ಹಳ್ಳ ದಾಟುವಾಗ ಕೈಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆ ಸಂಜೆ ಹಾಗೂ ಇಂದು ಬೆಳಗ್ಗೆ ಬೋಟ್ ಸಹಾಯದಿಂದ ಶೋಧ ಕಾರ್ಯ ನಡೆಸಿದ್ರು ಸಂತೋಷ್​ ಮೃತದೇಹ ಪತ್ತೆಯಾಗಿಲ್ಲ. ಮಗನನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಿಲ್ಲಾಡಳಿತದಿಂದ ನದಿಗೆ ನೀರು ಬಿಟ್ಟಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಜಿಲ್ಲಾಡಳಿತ ಮಾಹಿತಿ ನೀಡದಿರುವುದೇ ಈ ಅನಾಹುತಕ್ಕೆ ಕಾರಣವೆಂದು ಮೃತ ಯುವಕನ ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ABOUT THE AUTHOR

...view details