ರಾಯಚೂರು: ಕೃಷ್ಣಾ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಮುಂಜಾಗೃತೆಗಾಗಿ ಎನ್ಡಿಆರ್ಎಫ್ನ ರಕ್ಷಣಾ ತಂಡ ಜಿಲ್ಲೆಗೆ ಆಗಮಿಸಿದೆ.
25 ಜನರನ್ನೊಳಗೊಂಡ ಈ ತಂಡ ಜನರನ್ನು ರಕ್ಷಿಸಲು ಎಲ್ಲಾ ಸಿದ್ಧತೆಗಳನನ್ನು ಮಾಡಿಕೊಂಡಿದೆ. 25 ಜನರ ಈ ತಂಡ ಪುನಃ ಎರಡು ಗುಂಪುಗಳಾಗಿ, ಒಂದು ಗುಂಪು ಲಿಂಗಸೂಗೂರು ತಾಲೂಕು, ಇನ್ನೊಂದು ಗುಂಪು ರಾಯಚೂರು ತಾಲೂಕಿನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವ ಕಡೆ ಹೆಚ್ಚಿನ ರಕ್ಷಣೆ ಅಗತ್ಯವಿದೆಯೋ ಅಲ್ಲಿ ಈ ತಂಡ ಕಾರ್ಯಾಚರಣೆ ನಡೆಸಲಿದೆ.