ರಾಯಚೂರು:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗೋಡಿ ಗ್ರಾಮದ ನಡುಗಡ್ಡೆ ಪ್ರದೇಶದ ಕೆಲ ಕುಟುಂಬಗಳು ಪ್ರವಾಹಕ್ಕೆ ಸಿಲುಕಿದ್ದು, ಎನ್‌ಡಿಆರ್‌ಎಫ್ ತಂಡ ಅವರನ್ನು ರಕ್ಷಿಸಿದೆ.
ಜಮೀನು ಬಿಟ್ಟು ಬರಲು ನಡುಗಡ್ಡೆ ಜನರ ಹಿಂದೇಟು: ಮನವೊಲಿಸಿ ಕರೆತಂದ ಎನ್‌ಡಿಆರ್‌ಎಫ್ - CPI Yashavanth Bisnalli
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗೋಡಿ ಗ್ರಾಮದ ಮ್ಯಾದರಗಡ್ಡಿಯ ನಡುಗಡ್ಡೆ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಜನರನ್ನು ಎನ್‌ಡಿಆರ್‌ಎಫ್ ತಂಡವು ರಕ್ಷಿಸಿದೆ.
![ಜಮೀನು ಬಿಟ್ಟು ಬರಲು ನಡುಗಡ್ಡೆ ಜನರ ಹಿಂದೇಟು: ಮನವೊಲಿಸಿ ಕರೆತಂದ ಎನ್‌ಡಿಆರ್‌ಎಫ್](https://etvbharatimages.akamaized.net/etvbharat/prod-images/768-512-4058755-thumbnail-3x2-rbl.jpg)
ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯ
ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯ
ಕಾರ್ಯಾಚರಣೆಗೆಂದು ತಂಡ ತೆರಳಿದ್ದರೂ ಅಲ್ಲಿನ ಜನರು ತಮ್ಮ ಜಮೀನು, ಜಾನುವಾರುಗಳನ್ನು ಬಿಟ್ಟು ಬರಲು ಹಿಂದೇಟು ಹಾಕಿದ್ದರು. ಬಳಿಕ ಅಧಿಕಾರಿಗಳು ದೂರವಾಣಿ ಕರೆಗಳ ಮೂಲಕ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಈ ವೇಳೆ ಸ್ಥಳೀಯ ತಾಲೂಕು ಆಡಳಿತವು ನಮಗೆ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲಿಂಗಸೂಗೂರು ಸಹಾಯಕ ಆಯುಕ್ತರು, ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್ಐ ಪ್ರಕಾಶ್ ಡಂಬಳ ಭಾಗಿಯಾಗಿದ್ದರು.
Last Updated : Aug 6, 2019, 7:06 PM IST