ರಾಯಚೂರು: ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಪ್ರದೇಶದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ನಾರಾಯಣಪುರ(ಬಸವ ಸಾಗರ) ಜಲಾಶಯದಿಂದ ಇಂದು ಬೆಳಗ್ಗೆ 7 ಗಂಟೆ 1.11 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ. ಜಲಾಶಯಕ್ಕೀಗ 90 ಸಾವಿರ ಕ್ಯೂಸೆಕ್ ನೀರು ಹರಿದು(ಒಳ ಹರಿವು) ಬರುತ್ತಿದೆ.
ಕೃಷ್ಣಾ ನದಿಯಲ್ಲಿ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ರಾಯಚೂರು ತಾಲೂಕುಗಳ ಗ್ರಾಮಗಳು ಮತ್ತು ನಡುಗಡ್ಡೆ ಪ್ರದೇಶಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಗ್ರಾಮ ಮುಳುಗಡೆ ಹಂತ ತಲುಪಿದೆ. ಇದರಿಂದ ನಡುಗಡ್ಡೆ ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಳುವ ಸಾಧ್ಯತೆಯಿದೆ. ನದಿ ತೀರದ ಹೊಲಗಳಿಗೆ ನೀರು ನುಗ್ಗಿದೆ.