ರಾಯಚೂರು :ಹುಚ್ಚು ನಾಯಿ ದಾಳಿಯಿಂದ 5ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಸಂಭವಿಸಿದೆ.
ಹುಚ್ಚು ನಾಯಿ ದಾಳಿ : 5ಕ್ಕೂ ಹೆಚ್ಚು ಜನರಿಗೆ ಗಾಯ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಹುಚ್ಚು ನಾಯಿ ದಾಳಿಗೆ ಐದು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Five people are injured by dog attack at Raichur
ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ದಾಳಿ ನಡೆಸಿದ ಬಳಿಕ ಗ್ರಾಮದಲ್ಲಿನ ನಾಲ್ವರು ಹೆಚ್ಚು ಜನರ ಮೇಲೆ ಎರಗಿ ಕಿವಿ, ತಲೆ, ಮೂಗು ಸೇರಿದಂತೆ ದೇಹದ ನಾನಾ ಕಡೆ ಗಾಯಗೊಳಿಸಿದೆ. ಗಾಯಗೊಂಡವರನ್ನು ಸಿಂಧನೂರು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನಾಯಿಯ ಶೋಧ ನಡೆಸುತ್ತಿದ್ದಾರೆ.
ಬಳಗಾನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.