ಲಿಂಗಸುಗೂರು (ರಾಯಚೂರು) :ತಾಲೂಕಿನಆಸರೆ ಫರ್ಟಿಲಿಟಿ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಗ್ರಾಮೀಣ ಪ್ರನಾಳ ಶಿಶು(first test tube baby) ಜನನವಾಗಿದೆ. ಭ್ರೂಣ ತಜ್ಞೆ ಡಾ. ಪ್ರಿಯದರ್ಶಿನಿ ರಂಗನಾಥ್ ಮತ್ತು ಪ್ರನಾಳ ಶಿಶು ತಜ್ಞ ಡಾ.ರಂಗನಾಥ್ ಹಟ್ಟಿ ನೇತೃತ್ವದ ವೈದ್ಯರ ತಂಡ ಇಂಟ್ರಾ ಸಿಟಾಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ಬಳಸಿ ಯಶಸ್ವಿಯಾಗಿದ್ದಾರೆ.
ಹಟ್ಟಿ ಚಿನ್ನದ ಗಣಿಯ ಈ ದಂಪತಿಗೆ ದೀರ್ಘಕಾಲದಿಂದ ಮಕ್ಕಳಾಗದ ಕಾರಣ ಐಸಿಎಸ್ಐ ತಂತ್ರಜ್ಞಾನದ ಮೂಲಕ ಪ್ರಯೋಗಾಲಯದಲ್ಲಿ ಅಂಡಾಣು, ವೀರ್ಯಾಣು ಸಂಗ್ರಹಿಸಿ ಇಕ್ಸಿ ಪ್ರಕ್ರಿಯೆ ಮೂಲಕ ಭ್ರೂಣ ವರ್ಗಾವಣೆ ಮಾಡಲಾಗಿತ್ತು. ತಾಯಿ ಗರ್ಭದಲ್ಲಿ 9 ತಿಂಗಳು ಬೆಳೆದ ಮಗುವನ್ನು ಇಂದು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.