ಕರ್ನಾಟಕ

karnataka

ETV Bharat / state

ಹಾರ್ಡ್​ವೇರ್​​ ಶಾಪ್​​​​​​​ನಲ್ಲಿ ಅಗ್ನಿ ಅವಗಡ: ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿ - ಗಂಜ್ ಸರ್ಕಲ್ ಬಳಿ ಶಿವಶಕ್ತಿ ಹಾರ್ಡವೇರ್ ಅಂಗಡಿಯಲ್ಲಿ  ಬೆಂಕಿ

ರಾಯಚೂರು ನಗರದ ಹಾರ್ಡ್​ವೇರ್​ ಅಂಗಡಿಯೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದ್ದು, ಅಂಗಡಿಯಲ್ಲಿರಿಸಲಾದ ಫ್ಲೈವುಡ್ ಹಾಗೂ ಪೇಂಟ್ ಬಾಕ್ಸ್ ಹಾಗೂ ಡಬ್ಬಿಗಳೆಲ್ಲವೂ ಬೆಂಕಿಗಾಹುತಿಯಾಗಿವೆ.

ಹಾರ್ಡ್​ವೇರ್​​ ಶಾಪಿಗೆ ಬೆಂಕಿ

By

Published : Aug 27, 2019, 10:11 AM IST

Updated : Aug 27, 2019, 11:49 AM IST

ರಾಯಚೂರು: ಇದ್ದಕ್ಕಿದ್ದಂತೆ ನಗರದ ಹಾರ್ಡವೇರ್ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಹಾರ್ಡ್​ವೇರ್​​ ಶಾಪಿಗೆ ಬೆಂಕಿ

ನಗರದ ಗಂಜ್ ಸರ್ಕಲ್ ಬಳಿ ಶಿವಶಕ್ತಿ ಹಾರ್ಡವೇರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿನ್ನೆ ರಾತ್ರಿ ವೇಳೆ ಹಾರ್ಡವೇರ್ ಶಾಪ್ ನಲ್ಲಿ ಇರಿಸಲಾಗಿದ್ದ ಫ್ಲೈವುಡ್ ಹಾಗೂ ಪೇಂಟ್ ಬಾಕ್ಸ್ ಹಾಗೂ ಡಬ್ಬಿಗಳಿಗೆ ಬೆಂಕಿ ಹತ್ತಿರುವ ಪರಿಣಾಮ, ಬೆಂಕಿ ಧಗ ಧಗ ಉರಿಯುತ್ತಿರುವ ದೃಶ್ಯ ರಾತ್ರಿ ವೇಳೆ ಕಂಡು ಬಂತಾದರೂ, ಆಕಸ್ಮಿಕವಾಗಿ ಸಂಭವಿಸಿದೆಯೋ ಅಥವಾ ಯಾರೋ ಕಿಡಿಗೇಡಿಗಳಿಂದ ಘಟನೆ ನಡೆದಿದೆಯೋ ಎಂಬುವುದರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.

ರಾತ್ರಿ ವೇಳೆ ಧಗ ಧಗ ಉರಿಯುತ್ತಿದ್ದ ಬೆಂಕಿ ಕಂಡು ಸುತ್ತಮುತ್ತಲಿನ ಜನರಲ್ಲಿ ಆತಂಕ ಉಂಟು ಮಾಡಿತ್ತು. ಬೆಂಕಿ ಹೊತ್ತಿಕೊಂಡಿರುವ ವಿಷಯ ಕೇಳಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸಪಟ್ಟರು.

ಸದರ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಘಟನೆ ಕುರಿತು ಇದುವರೆಗೂ ಪ್ರಕರಣ ದಾಖಲಾಗಿಲ್ಲ.

Last Updated : Aug 27, 2019, 11:49 AM IST

ABOUT THE AUTHOR

...view details