ರಾಯಚೂರು: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು, ಕೊಟ್ಟಿಗೆಯಲ್ಲಿದ್ದ ಎರಡು ಜಾನುವಾರುಗಳು ಸಜೀವವಾಗಿ ದಹನವಾಗಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಹತ್ತಿಗುಡ್ಡ ಗ್ರಾಮದಲ್ಲಿ ನಡೆದಿದೆ.
ದನದ ಕೊಟ್ಟಿಗೆಗೆ ಬೆಂಕಿ: ಸಜೀವವಾಗಿ ಬೆಂಕಿಗೆ ಆಹುತಿಯಾದ ಜಾನುವಾರುಗಳು - ರಾಯಚೂರು
ಸೊಳ್ಳೆ ಕಾಟ ಹೆಚ್ಚಿದ್ದರಿಂದ ಕೊಟ್ಟಿಗೆ ಪಕ್ಕ ಚಿಕ್ಕದಾಗಿ ಬೆಂಕಿ ಹಾಕಲಾಗಿತ್ತು. ಆದರೆ, ಈ ಬೆಂಕಿ ಕೊಟ್ಟಿಗೆಗೆ ಹೊತ್ತಿಕೊಂಡು ಭಾರೀ ಅನಾಹುತ ಉಂಟಾಗಿದೆ.
ಸಜೀವವಾಗಿ ಬೆಂಕಿಗೆ ಆಹುತಿಯಾದ ಜಾನುವಾರುಗಳು
ಕರಿಬಸವನಗೌಡ ಎಂಬುವರಿಗೆ ಸೇರಿದ ಒಂದು ಎಮ್ಮೆ, ಒಂದು ಆಕಳು ಮೃತಪಟ್ಟಿವೆ. ಸೊಳ್ಳೆ ಕಾಟ ಹೆಚ್ಚಿದ್ದರಿಂದ ಕೊಟ್ಟಿಗೆ ಪಕ್ಕ ಚಿಕ್ಕದಾಗಿ ಬೆಂಕಿ ಹಾಕಲಾಗಿತ್ತು. ಆದರೆ ಈ ಬೆಂಕಿ ಕೊಟ್ಟಿಗೆಗೆ ಹೊತ್ತಿಕೊಂಡು ಭಾರೀ ಅನಾಹುತ ಉಂಟಾಗಿದೆ.
ಈ ಅವಘಡದಿಂದ ಎರಡು ಜಾನುವಾರು ಜೀವಂತ ಸುಟ್ಟು ಕರಕಲಾಗಿವೆ. ತುರುವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.