ಲಿಂಗಸೂಗೂರು :ನಗರದಲ್ಲಿ ಗೊಬ್ಬರ ಸಾಗಣೆ ಮಾಡುತ್ತಿದ್ದ ಲಾರಿಯೊಂದಕ್ಕೆ ಬೆಂಕಿ ಬಿದ್ದ ಘಟನೆ ನಡೆದಿದೆ. ಚಾಲಕನ ಕೂಗಾಟ ಕೇಳಿ ಘಟನಾ ಸ್ಥಳಕ್ಕೆ ಓಡಿ ಬಂದ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಹಾಯ ಮಾಡಿದ್ದಾರೆ.
ಗೊಬ್ಬರದ ಲಾರಿಗೆ ಬೆಂಕಿ: ತಪ್ಪಿದ ಭಾರಿ ಅನಾಹುತ - Fertilizer
ಕೊಪ್ಪಳದಿಂದ ಶಹಪುರಕ್ಕೆ ಗೊಬ್ಬರ ಸಾಗಣೆ ಮಾಡುತ್ತಿದ್ದ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಆಗಬಹುದಾದಂತಹ ಅನಾಹುತ ತಪ್ಪಿದೆ.
ಕೊಪ್ಪಳದಿಂದ ಶಹಪುರಕ್ಕೆ ಗೊಬ್ಬರ ಸಾಗಣೆ ಮಾಡುತ್ತಿದ್ದ ಲಾರಿಯ ಹಿಂದಿನ ಗಾಲಿಯ ಬ್ರೇಕ್ ಜಾಮ್ ಆಗಿದ್ದರಿಂದ ಕಸಬಾ-ಲಿಂಗಸುಗೂರ ಮಧ್ಯ ಲಾರಿಯ ಟೈರ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಲಾರಿಗೆ ತಾಗುತ್ತಿದ್ದಂತೆ ಚಾಲಕ ಜನರನ್ನು ಕರೆಯಲು ಯತ್ನಿಸಿದ್ದಾನೆ. ಕೂಗಾಟ ಕೇಳಿದ ಸ್ಥಳೀಯರು ಬೆಂಕಿ ಬಿದ್ದಿರುವುದನ್ನು ನೋಡಿ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.
ತಕ್ಷಣ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಮೂಲಕ ಸುಟ್ಟು ಕರಕಲಾಗುತ್ತಿದ್ದ ಅಂದಾಜು 24 ಲಕ್ಷ ರೂ. ಮೌಲ್ಯದ ಲಾರಿ ಹಾಗೂ ಅಪಾರ ಪ್ರಮಾಣದ ಗೊಬ್ಬರ ಮತ್ತು ಮುಂದೆ ಆಗಬಹುದಾದಂತಹ ಅನಾಹುತ ತಪ್ಪಿದಂತಾಗಿದೆ. ಬೆಂಕಿಯಿಂದ ಲಾರಿಯ ಟೈರ್ ಸುಟ್ಟಿದ್ದು ಸುಮಾರು 1 ಲಕ್ಷ ರೂ. ಹಾನಿಯಾಗಿದೆ ಎಂದು ಲಾರಿ ಚಾಲಕ ಜಗದೀಶ್ ತಿಳಿಸಿದ್ದಾನೆ.