ರಾಯಚೂರು: ನಗರಸಭೆಗೆ ಸೇರಿದ ಜನ ಸ್ಪಂದನ ಕಚೇರಿಯೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಕಂಪ್ಯೂಟರ್ ಸೇರಿದಂತೆ ಮಹತ್ವದ ದಾಖಲೆಗಳು ಬೆಂಕಿಗಾಹುತಿ ಆಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರಸಭೆಗೆ ಸೇರಿದ ಕಚೇರಿಯಲ್ಲಿ ಬೆಂಕಿ: ಮಹತ್ವದ ದಾಖಲೆಗಳೇ ಬೆಂಕಿಗಾಹುತಿ - undefined
ನಗರದಲ್ಲಿರುವ ಜನ ಸ್ಪಂದನ ಕಚೇರಿಯಲ್ಲಿ ಧಿಡೀರ್ ಬೆಂಕಿ ಕಾಣಿಸಿಕೊಂಡಿದ್ದು, ಮಹತ್ವದ ದಾಖಲೆಗಳು ಬೆಂಕಿಗಾಹುತಿ ಆಗಿವೆ.

ನಗರಸಭೆ ಕಚೇರಿ
ನಗರದ ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿರುವ ನಗರಸಭೆಗೆ ವ್ಯಾಪ್ತಿಗೆ ಬರುವ ಜನ ಸ್ಪಂದನ ಸ್ಟೋರ್ - ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಶ್ರಯ ಮನೆ ಯೋಜನೆಗೆ ಸಂಬಂಧಿಸಿದ ದಾಖಲೆಗಳು, ಫಲಾನುಭವಿಗಳ ಅರ್ಜಿಗಳು, ಮಹತ್ವದ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.
ನಗರಸಭೆ ಕಚೇರಿ
ವಿಷಯ ತಿಳಿದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಯಿಂದ ನಗರಸಭೆಗೆ ಸೇರಿದ ದಾಖಲೆಗಳು ಮತ್ತು ಪೀಠೋಪಕರಣಗಳು ಭಸ್ಮವಾಗಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸದರ್‌ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.