ರಾಯಚೂರು: ಕೋವಿಡ್ ಹಿನ್ನೆಲೆಯಲ್ಲಿ ಕರ್ಫ್ಯೂ ಇದ್ದರೂ ಗುಂಪು ಸೇರಿಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಮುಖಂಡ ಸೇರಿ 12 ಜನರ ವಿರುದ್ಧ ದೂರು ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಎಸ್. ರವಿ ಬೋಸರಾಜ ನೇತೃತ್ವದಲ್ಲಿ ಪ್ರತಿಭಟನೆ ಮಾಡಿರುವ 12 ಜನರ ವಿರುದ್ಧ ಸದರ್ ಬಜಾರ್ ಪೋಲೀಸರು ರೋಗ ನಿರೋಧಕ ನಿರ್ಬಂಧಕ ನಿಯಮ ಅಡಿ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಸೇರಿ 12 ಜನರು ವಿರುದ್ಧ ಎಫ್ಐಆರ್ ದಾಖಲು ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಪ್ರತಿಭಟನೆಗೆ ಅವಕಾಶ ಇರುವುದಿಲ್ಲ. ಆದರೂ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಜಿಲ್ಲಾ ಮುಖಂಡ ಎನ್.ಎಸ್.ರವಿ ಬೋಸರಾಜ, ನಗರಸಭೆ ಸದಸ್ಯ ಜಿಂದಪ್ಪ, ನರಸಿಂಹಲು ಮಾಡಗಿರಿ, ಯುವ ಮೋರ್ಚಾದ ಅಧ್ಯಕ್ಷ ಅರುಣ ದೋತರಬಂಡಿ, ಸಿರಾಜ್ ಜಾಫ್ರಿ, ಗುರುರಾಜ, ಬೂದೆಪ್ಪ, ನಗರಸಭೆ ಸದಸ್ಯ ನರಸರೆಡ್ಡಿ, ಸಾಜೀದ್ ಸಮೀರ್, ಮಲ್ಲೇಶ ಕೊಲುಮಿ ರಾಂಪೂರ, ಶಾಲಂ, ರಂಜಿತ್ ಹೀರಾ ಮೇಲೆ ದಾಖಲಾಗಿದೆ.
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆ ಇರುವಷ್ಟು ಸಿಗುತ್ತಿಲ್ಲ. ಆಕ್ಸಿಜನ್ ಪೂರೈಕೆಯಾಗಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡನ ನೇತೃತ್ವದಲ್ಲಿ ಪ್ರತಿಭಟಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.