ರಾಯಚೂರು: ಜಿಲ್ಲಾ ಉಸ್ತುವರಿಯಾಗಿರುವ ಸಚಿವ ಬಿ.ಶ್ರೀರಾಮುಲು ಹಲವು ದಿನಗಳ ನಂತರ ಜಿಲ್ಲೆಗೆ ಭೇಟಿ ನೀಡಿದ್ದಾರೆ.
ಕೊನೆಗೂ ರಾಯಚೂರು ಜಿಲ್ಲೆಗೆ ಬಂದ್ರು ಉಸ್ತುವಾರಿ ಸಚಿವ! - raychuru district in charge minister Ramulu
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಹಲವು ದಿನಗಳೇ ಕಳೆದಿದ್ದರೂ ಜಿಲ್ಲೆಗೆ ಮಾತ್ರ ಸಚಿವರು ಭೇಟಿ ನೀಡಿರಲಿಲ್ಲ. ಕೊನೆಗೂ ಜಿಲ್ಲೆಗೆ ಆಗಮಿಸುವ ಸಮಯ ಕೂಡಿ ಬಂದಿದ್ದು, ಸೋಮವಾರ ಸಂಜೆ ಸಚಿವ ಶ್ರೀರಾಮುಲು ಜಿಲ್ಲೆಗೆ ಆಗಮಿಸಿದ್ದಾರೆ.
ಸೋಮವಾರ ಸಂಜೆ ಆಗಮಿಸಿದ ಅವರು, ನಗರದ ಜಿಲ್ಲಾಧಿಕಾರಿ ಮನೆಯ ಬಳಿ ಇರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸುವ ಮೂಲಕ ಜಿಲ್ಲೆ ಪ್ರವೇಶಿಸಿದರು. ಪುತ್ಥಳಿಗೆ ಮಾಲಾರ್ಪಣೆ ಮಾಡುವ ವೇಳೆ ದಿಢೀರ್ ವಿದ್ಯುತ್ ಕಡಿತಗೊಂಡಿದ್ದು, ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕಾರ್ಯಕರ್ತರು ಹಾಗೂ ಮುಖಂಡರ ಮೊಬೈಲ್ ಟಾರ್ಚ್ ಸಹಾಯದಿಂದ ಸಚಿವರು ಮಾಲಾರ್ಪಣೆ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಹಲವು ದಿನ ಕಳೆದಿದ್ದರೂ ಸಚಿವರು ಜಿಲ್ಲೆಗೆ ಭೇಟಿ ನೀಡುವುದಾಗಲಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದಾಗಲಿ ಮಾಡಿರಲಿಲ್ಲ. ಮಂಗಳವಾರ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.