ಕರ್ನಾಟಕ

karnataka

ETV Bharat / state

ರಾಯಚೂರು: ದ್ವಿಚಕ್ರ ವಾಹನಕ್ಕೆ ಬಸ್‌ ಡಿಕ್ಕಿ.. ತಂದೆ ಮಗ ಸ್ಥಳದಲ್ಲೇ ಸಾವು - raichur bus accident

ಸರ್ಕಾರಿ ಬಸ್ ಮತ್ತು ಬೈಕ್​ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ-ಹೊಸೂರು ಗ್ರಾಮ ಬಳಿ ನಡೆದಿದೆ.

road accident at raichur
ದ್ವಿಚಕ್ರ ವಾಹನಕ್ಕೆ ಬಸ್‌ ಡಿಕ್ಕಿ

By

Published : Sep 14, 2022, 10:08 AM IST

ರಾಯಚೂರು: ಸಾರಿಗೆ ಸಂಸ್ಥೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿದ್ದ ತಂದೆ, ಮಗ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ-ಹೊಸೂರು ಗ್ರಾಮ ಬಳಿ ಜರುಗಿದೆ.

ವಂದಲಿ-ಹೊಸೂರು ಗ್ರಾಮದ ತಂದೆ ರಮೇಶ ಹಾಗೂ ಮಗ ಅಮರೇಶ ಮೃತರು. ಅಪ್ಪ-ಮಗ ಇಬ್ಬರೂ ತಮ್ಮ ಮನೆಯಲ್ಲಿರುವ ಜಾನುವಾರುಗಳಿಗೆ ಮೇವು ತರಲು ಬೈಕ್​ನಲ್ಲಿ ಹೊಲಕ್ಕೆ ತೆರಳಿದ್ದರು. ಮೇವು ತೆಗೆದುಕೊಂಡು ವಾಪಸ್ ಮನೆಗೆ ಬರುವಾಗ ದುರಂತ ಸಂಭವಿಸಿದ್ದು, ಬೈಕ್​ಗೆ ಬಸ್ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ:ಅಪಘಾತವಾದ ಸ್ಥಳಕ್ಕೆ ಬಾರದ ಆಂಬ್ಯುಲೆನ್ಸ್​​... ಗಾಯಾಳುವಿಗೆ JCBಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಸ್ಥಳೀಯರು!

ಈ ಕುರಿತು ಘಟನಾ ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಶಿವಮೊಗ್ಗ : ರೈಲು ಬೋಗಿಯಿಂದ ಜಾರಿಬಿದ್ದು ಅಪ್ಪ ಮಗ ಸಾವು

ABOUT THE AUTHOR

...view details