ರಾಯಚೂರು: ತಂದೆ ಮತ್ತು ಮಗ ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪಲಗಲದಿನ್ನಿ ಗ್ರಾಮದ ನಾರಾಯಣಪುರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಡೆದಿದೆ.
ಮೂರು ವರ್ಷದ ಮಗು ಲಕ್ಕಪ್ಪ, ತಂದೆ ರಮೇಶ್(35) ಮೃತರು. ಮಗುವಿನ ಮೃತದೇಹ ಪತ್ತೆಯಾಗಿದ್ದು, ತಂದೆಯ ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ನಿನ್ನೆ ರಮೇಶ್ ಪತ್ನಿ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ, ಅಲ್ಲಿಯೇ ಆಟವಾಡುತ್ತಿದ್ದ ಮಗು ಕಾಲು ಜಾರಿ ನೀರಿಗೆ ಬಿದಿದ್ದೆ. ಅಲ್ಲೇ ನದಿಯಲ್ಲಿ ಮೀನು ಹಿಡಿಯುತ್ತಿದ ತಂದೆಗೆ ವಿಷಯ ತಿಳಿದು ಆತುರ ಆತುರವಾಗಿ ಆಗಮಿಸುವಾಗ ಹರಗೋಲು ಪಲ್ಟಿ ಹೊಡೆದು ನದಿಯಲ್ಲಿ ಮುಳುಗಿದ್ದಾರೆ.