ರಾಯಚೂರು:ವಿದ್ಯುತ್ ತಂತಿ ತಗುಲಿ ತಂದೆ, ಮಗ ಸಾವನ್ನಪ್ಪಿರುವ ಘಟನೆ ತಾಲೂಕಿನ ದಿನ್ನಿ ಗ್ರಾಮದಲ್ಲಿ ನಡೆದಿದೆ.
ರಾಯಚೂರಿನಲ್ಲಿ ವಿದ್ಯುತ್ ತಂತಿ ತಗುಲಿ ತಂದೆ - ಮಗ ಸಾವು - Raichur latest news
ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಂದೆ - ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿದ್ಯುತ್ ತಂತಿ ತಗುಲಿ ತಂದೆ -ಮಗ ಸಾವು
ಮಹೇಶ ಆನಂದಪ್ಪ(46), ವಿನೋದ್ ಮಹೇಶ್(16) ಮೃತಪಟ್ಟವರು. ಮನೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಆಗ ತಂದೆ ಮಹೇಶ್, ಏನಾಗಿದೆ ಎಂದು ನೋಡಲು ತೆರಳಿದ್ದ ವೇಳೆ ತಂತಿಯಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಕೆಳಗೆ ಬಿದ್ದ ತಂದೆಯನ್ನು ನೋಡಲು ಹೋದ ಮಗನಿಗೂ ವಿದ್ಯುತ್ ತಗುಲಿದೆ ಎನ್ನಲಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ.
Last Updated : Aug 14, 2020, 11:11 AM IST