ಕರ್ನಾಟಕ

karnataka

ರಾಯಚೂರು: ಜಲಪಾತ ವೀಕ್ಷಣೆಗೆ ತೆರಳಿದ್ದ ತಂದೆ-ಮಗ ನೀರುಪಾಲು

ಜಲಪಾತ ವೀಕ್ಷಣೆಗೆ ತೆರಳಿದ್ದ ತಂದೆ-ಮಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅಲ್ಲದೆ ಇನ್ನೊಬ್ಬರು ಈಜಿ ದಡ ಸೇರಿದರೆ ಮತ್ತೊಬ್ಬರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

By

Published : Jul 23, 2020, 7:58 PM IST

Published : Jul 23, 2020, 7:58 PM IST

Updated : Jul 23, 2020, 10:11 PM IST

father and a son drowned in waterfall at raichur
ಶಾಕಿಂಗ್​: ಜಲಪಾತ ವೀಕ್ಷಣೆಗೆ ತೆರಳಿದ್ದ ತಂದೆ-ಮಗ ನೀರುಪಾಲು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿಯ ಗುಂಡಲಬಂಡ ಜಲಪಾತ ವೀಕ್ಷಣೆಗೆ ತೆರಳಿದ್ದ ತಂದೆ-ಮಗ ನೀರು ಪಾಲಾದ ಘಟನೆ ಗುರುವಾರ ಸಂಜೆ ನಡೆದಿದೆ.

ಜಲಪಾತದ ನೀರಿನ ರಭಸಕ್ಕೆ ಕೊಚ್ಚಿ ಹೋದವರನ್ನು ರಾಯಚೂರಿನ ದೇವದುರ್ಗ ತಾಲೂಕಿನ ಕೃಷ್ಣಪ್ಪ ನಾಯಕ (35), ಧನುಷ್ (05) ಎಂದು ಗುರುತಿಸಲಾಗಿದೆ. ನೀರು ಪಾಲಾದವರ ಹುಡುಕಾಟ ಮುಂದುವರಿದಿದೆ.

ಶಾಕಿಂಗ್​: ಜಲಪಾತ ವೀಕ್ಷಣೆಗೆ ತೆರಳಿದ್ದ ತಂದೆ-ಮಗ ನೀರುಪಾಲು

ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಗುಂಡಲಬಂಡ ಜಲಪಾತ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ಹಿನ್ನೆಲೆ ಜಲಪಾತ ವೀಕ್ಷಣೆಗೆ ಬಂದಿದ್ದ ನಾಲ್ವರಲ್ಲಿ ತಂದೆ-ಮಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.

ಸಿದ್ದಪ್ಪ ನಾಯಕ ಎಂಬಾತ ಈಜಿ ದಡ ಸೇರಿದ್ದಾರೆ. ಜಲಪಾತದ ನೀರಿನ ಮಧ್ಯೆ ಸಿಲುಕಿಕೊಂಡಿದ್ದ ಮಹಾಂತೇಶ ಎಂಬಾತನನ್ನು ಸ್ಥಳೀಯರ ಸಹಕಾರದಿಂದ ಪೊಲೀಸ್, ಅಗ್ನಿಶಾಮಕ ದಳದ ತಂಡ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಡಿವೈಎಸ್​​ಪಿ ಎಸ್​​​​​.ಎಸ್ ಹುಲ್ಲೂರು, ಅಗ್ನಿಶಾಮಕ ಠಾಣಾಧಿಕಾರಿ ಮಾರ್ಕಂಡೇಯ ನೇತೃತ್ವದಲ್ಲಿ ಸ್ಥಳೀಯರು ನಾಪತ್ತೆಯಾದರ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

Last Updated : Jul 23, 2020, 10:11 PM IST

ABOUT THE AUTHOR

...view details