ರಾಯಚೂರು:ಕಳೆದ ಗುರುವಾರ ಮಧ್ಯಾಹ್ನ ಲಿಂಗಸುಗೂರು ತಾಲೂಕಿನ ಗುಂಡಲಬಂಡ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಕೃಷ್ಣಪ್ಪ ನಾಯಕ, ಧನುಷ್, ಮಹಾಂತೇಶ ಹಾಗೂ ಸಿದ್ದಪ್ಪ ಎಂಬುವವರ ಪೈಕಿ ಕೃಷ್ಣಪ್ಪ ಹಾಗೂ ಅವರ ಮಗ ಧನುಷ್ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಸಿದ್ದಪ್ಪ ಈಜಿ ದಡ ಸೇರಿದ್ದರು.
ಇನ್ನು ಪ್ರವಾಹದ ಮಧ್ಯೆ ಸಿಲುಕಿದ್ದ ಯುವಕ ಮಹಾಂತೇಶನ ರಕ್ಷಣೆಗೆ ಪೊಲೀಸ್ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಚರ್ಚೆ ನಡೆಸುತ್ತಿದ್ದಾಗ, ಯುವಕನ ಅವಸ್ಥೆ ನೋಡಲಾಗದೆ ಹನುಮಂತ ಗೋಲಪಲ್ಲಿ ಎಂಬುವವರು ನೀರಿಗೆ ಧುಮುಕಿ ಆತನ ಪ್ರಾಣ ಕಾಪಾಡಿದ್ದರು. ಈ ಕುರಿತು ಅವರು 'ಈಟಿವಿ ಭಾರತ'ದ ಜೊತೆ ಅನುಭವ ಹಂಚಿಕೊಂಡಿದ್ದಾರೆ.
ಇದನ್ನು ಓದಿ:ರಾಯಚೂರು: ಜಲಪಾತ ವೀಕ್ಷಣೆಗೆ ತೆರಳಿದ್ದ ತಂದೆ-ಮಗ ನೀರುಪಾಲು