ಕರ್ನಾಟಕ

karnataka

ETV Bharat / state

ನಾಲೆಗಳಿಗೆ ಸಮರ್ಪಕ ನೀರು ಒದಗಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ತುಂಗಭದ್ರಾ ಎಡದಂಡೆ ಕೆಳಭಾಗದ ನಾಲೆಗಳಿಗೆ ಕಾಡಾ ಮೀಟಿಂಗ್​ನಲ್ಲಿ ನಿಗದಿಪಡಿಸಿದ ಪ್ರಮಾಣದ ನೀರು ಒದಗಿಸುವಂತೆ ಒತ್ತಾಯಿಸಿ ರೈತರು ಸಿರವಾರ ಪಟ್ಟಣ ಬಂದ್‌ ಮಾಡಿ ಪ್ರತಿಭಟಿಸಿದರು.

farmers-protest-demanding-satisfactory-water-supply
ನಾಲೆಗಳಿಗೆ ಸಮರ್ಪಕ ನೀರು ಒದಗಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

By

Published : Jan 23, 2021, 8:57 AM IST

ಸಿರವಾರ (ರಾಯಚೂರು):ತುಂಗಭದ್ರಾ ಎಡದಂಡೆ ಕೆಳಭಾಗದ ನಾಲೆಗಳಿಗೆ ಸಮರ್ಪಕ ನೀರು ಒದಗಿಸುವಂತೆ ಆಗ್ರಹಿಸಿ, ರೈತರು ಸಿರವಾರ ಪಟ್ಟಣ ಬಂದ್‌ ಮಾಡಿ ಪ್ರತಿಭಟಿಸಿದರು.

ನಾಲೆಗಳಿಗೆ ಸಮರ್ಪಕ ನೀರು ಒದಗಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಸಿರವಾರ ತಾಲೂಕಿನ ಕೆಳಭಾಗದ ಟಿಎಲ್‌ಬಿಸಿಯ 104 ಮೈಲ್‌ಗೆ ಕಾಡಾ ಮೀಟಿಂಗ್ ನಿಗದಿತ ಪ್ರಮಾಣದಂತೆ ನೀರು ಹರಿಸಬೇಕು. ಆದರೆ, ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಕೆಳಭಾಗದ ರೈತರ ಹೊಲಗಳಿಗೆ ನೀರು ಸಿಗದೇ ವ್ಯವಸಾಯ ಸಾಕಷ್ಟು ತೊಂದರೆಯಾಗಿದೆ. ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ, ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪಿಸಿದರು.

ಓದಿ:ಕೊರೊನಾ ಬಿಕ್ಕಟ್ಟಿನ ಬಳಿಕ ದಾಖಲೆ ಬರೆಯಿತು ಅಂಜನಾದ್ರಿ ಬೆಟ್ಟದ ಆಂಜನೇಯನ ಆದಾಯ!

ಲಿಂಗಸೂಗೂರು-ರಾಯಚೂರು ರಸ್ತೆಯನ್ನ ಬಂದ್ ಮಾಡಿ ಪ್ರತಿಭಟಿಸುತ್ತಿದ್ದ ವೇಳೆ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು.

ABOUT THE AUTHOR

...view details