ಕರ್ನಾಟಕ

karnataka

ETV Bharat / state

ನಾರಾಯಣಪುರ ಬಲದಂಡೆ ದಾಟಲು ನಿರ್ಮಿಸಿದ ಪಾದಚಾರಿ ದುರಸ್ತಿಗೆ ಆಗ್ರಹ

ನಾರಾಯಣಪುರ ಬಲದಂಡೆ ಮುಖ್ಯನಾಲೆ ದಾಟಲು ನಿರ್ಮಿಸಿದ ಪಾದಚಾರಿ ಸೇತುವೆಗಳು ಶಿಥಿಲಗೊಂಡಿವೆ. ಈ ರಸ್ತೆಗಳನ್ನು ದುರಸ್ತಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

Farmers' demand to sell road repairs
ನಾರಾಯಣಪುರ ಬಲದಂಡೆ ದಾಟಲು ನಿರ್ಮಿಸಿದ ಪಾದಚಾರಿ ದುರಸ್ತಿಗೆ ಆಗ್ರಹ

By

Published : Sep 5, 2020, 12:11 AM IST

Updated : Sep 5, 2020, 7:19 AM IST

ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ರೋಡಲಬಂಡ (ಯುಕೆಪಿ) ಬಳಿ ನಾರಾಯಣಪುರ ಬಲದಂಡೆ ಮುಖ್ಯನಾಲೆ ದಾಟಲು ನಿರ್ಮಿಸಿದ ಪಾದಚಾರಿ ಸೇತುವೆಗಳು ಶಿಥಿಲಗೊಂಡಿವೆ.

ಎರಡು ದಶಕಗಳ ಹಿಂದೆ ಮುಖ್ಯ ನಾಲೆ ನಿರ್ಮಾಣ ಸಂದರ್ಭದಲ್ಲಿ ಜಮೀನುಗಳು ಇಬ್ಭಾಗವಾಗಿ ಹಾಗೂ ಉಳಿದ ಜಮೀನು ಸಂಪರ್ಕ ಕಲ್ಪಿಸುವ ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳುವ ಉದ್ದೇಶದಿಂದ ನಿರ್ಮಿಸಿದ ಪಾದಾಚಾರಿ ಸೇತುವೆಗಳು ಅಪಾಯದ ಹಂತ ತಲುಪಿವೆ.

ನಾರಾಯಣಪುರ ಬಲದಂಡೆ ದಾಟಲು ನಿರ್ಮಿಸಿದ ಪಾದಚಾರಿ ದುರಸ್ತಿಗೆ ಆಗ್ರಹ

ರೋಡಲಬಂಡ, ಜಾವೂರು, ಜಂಗಿರಾಂಪೂರತಾಂಡಾ, ಉಪ್ಪೇರಿ, ಸುಣಕಲ್ಲ ಸೇರಿದಂತೆ ಇತರೆ ಗ್ರಾಮಗಳ ರೈತ ಸಮೂಹ ಪಾದಚಾರಿ ಸೇತುವೆ ಬಳಸಿ ರಸಗೊಬ್ಬರ, ಬೀಜ, ಕೂಲಿಕಾರ್ಮಿಕರ ತಿರುಗಾಡಲು, ನೀರಾವರಿ ಸೌಲಭ್ಯದ ಪೈಪ್​​​ಲೈನ್​​ ಒಯ್ಯಲು ಹೆಚ್ಚು ಅನುಕೂಲ ಆಗಿದ್ದ ಸೇತುವೆಗಳ ದುರಸ್ತಿಗೆ ಆಗ್ರಹಿಸಿದ್ದಾರೆ.

ಬಲದಂಡೆ ಮುಖ್ಯ ನಾಲೆ ಕೋಟ್ಯಂತರ ಹಣ ಖರ್ಚು ಮಾಡಿ ಅಧುನೀಕರಣ ಕಾಮಗಾರಿ ಕೈಗೆತ್ತಿಗೊಂಡಿದೆ. ಅದರೆ ಗುತ್ತಿಗೆದಾರರು ಪಾದಚಾರಿ ಸೇತುವೆ ದುರಸ್ತಿಗೆ ಮುಂದಾಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಶಾಶ್ವತ ದುರಸ್ತಿಗೆ ಮುಂದಾಗಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

Last Updated : Sep 5, 2020, 7:19 AM IST

ABOUT THE AUTHOR

...view details